ಲವ್ ಮಾಕ್ಟೆಲ್-2 ರಿಲೀಸ್: ಏನಂತಾರೆ ನಟಿ ,ನಿರ್ಮಾಪಕಿ?

234

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಲವ್ ಮಾಕ್ಟೆಲ್ ಚಿತ್ರ ಸೂಪರ್ ಹಿಟ್ ಆಯ್ದು. ಇಂದು ಅದರ ಮುಂದುವರೆದ ಭಾಗ ರಿಲೀಸ್ ಆಗಿದೆ. ನಿನ್ನೆ ರಾತ್ರಿಯೇ 22 ಕಡೆ ಪ್ರಿಮಿಯರ್ ಶೋ ನಡೆಸಲಾಗಿತ್ತು. ಇದೀಗ ಎಲ್ಲೆಡೆ ರಿಲೀಸ್ ಆಗಿದ್ದು, ಜನರು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ನಟಿ, ಹಾಗೂ ನಿರ್ಮಾಪಕಿ ಮಿಲನಾ ನಾಗರಾಜ್, ಇಂದು ಬೆಳ್ಳಗೆಯಿಂದ ಎಲ್ಲ ಥಿಯೇಟರ್ ಫುಲ್ ಆಗಿವೆ. ನಮಗೆ ಸೀಟು ಸಿಕ್ಕಿಲ್ಲ. ಗಾಂಧಿ ಕ್ಲಾಸಿನಲ್ಲಿ ಕುಳಿತು ಸಿನಿಮಾ ನೋಡಿದ್ದೇವೆ. ಈ ಬಗ್ಗೆ ನನಗೆ ಟೆನ್ಷನ್ ಇತ್ತು. ಜನರು ಪಾಸಿಟಿವ್ ಆಗಿ ಮಾತನಾಡುತ್ತಿದ್ದು ತುಂಬಾ ಖುಷಿಯಾಗಿದೆ ಎಂದಿದ್ದಾರೆ.

ಡಾರ್ಲಿಂಗ್ ಕೃಷ್ಣಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನಟನೆಯ ಜೊತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಲವ್ ಮಾಕ್ಟೆಲ್ ಸೀಕ್ವೆಲ್ ನಲ್ಲಿ ಕೃಷ್ಣಾ ಪತ್ನಿ ಹಾಗೂ ನಟಿ ಮಿಲನಾ ನಾಗರಾಜ್ ಮುಂದುವರೆದಿದ್ದು ಕುತೂಹಲ ಮೂಡಿಸಿದೆ. ಹೊಸದಾಗಿ ಇಬ್ಬರು ನಟಿಯರು ಇದರಲ್ಲಿ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!