ಲಕ್ಕಿ ಮ್ಯಾನ್ ನಾಳೆ ಪೇಯ್ಡ್ ಪ್ರೀಮಿಯರ್ ಶೋ

214

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೌತಿಕವಾಗಿ ದೂರವಾದ ಮೇಲೆ ಬಿಡುಗಡೆಯಾಗುತ್ತಿರುವ 2ನೇ ಚಿತ್ರ ಲಕ್ಕಿ ಮ್ಯಾನ್. ಅಪ್ಪು ಇದರಲ್ಲಿ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿದ್ದಾರೆ.

ಇದೇ ಶುಕ್ರವಾರ ಸಿನಿಮಾ ರಿಲೀಸ್ ಆಗುತ್ತಿದ್ದು, ಗುರುವಾರ ಸಂಜೆ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಬೆಂಗಳೂರಿನ ಪಿವಿಆರ್, ಐನಾಕ್ಸ್, ಸಿಲಿನಪೊಲಿಸ್, ಗೋಪಾಲನ್ ಮೆಲ್ಟಿಪ್ಲೆಕ್ಸ್ ಗಳಲ್ಲಿ 23 ಪೇಯ್ಡ್ ಪ್ರೀಮಿಯರ್ ಶೋ ಇವೆ.

ಮೈಸೂರಿನ ಪಿವಿಆರ್, ಐನಾಕ್ಸ್, ಡಿಆರ್ ಸಿ ಮಲ್ಟಿಪ್ಲೆಕ್ಸ್, ಶಿವಮೊಗ್ಗದ ಭಾರತ್ ಸಿನಿಮಾಸ್, ಮಂಗಳೂರಿನ ಪಿವಿಆರ್, ತುಮಕೂರಿನ ಐನಾಕ್ಸ್ ನಲ್ಲಿ ಲಕ್ಕಿ ಮ್ಯಾನ್ ಶೋಗಳಿವೆ. ತಮಿಳಿನ ಓ ಮೈ ಕಡವುಲೆ ಚಿತ್ರದ ರಿಮೇಕ್ ಆಗಿದ್ದು, ಪ್ರಭುದೇವ್ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. 400 ಥಿಯೇಟರ್ ಗಳಲ್ಲಿ ಶುಕ್ರವಾರ ಸಿನಿಮಾ ರಿಲೀಸ್ ಆಗುತ್ತಿದೆ. ಅಪ್ಪು ಅಭಿಮಾನಿಗಳು ಮತ್ತೊಮ್ಮೆ ತಮ್ಮ ದೇವರನ್ನು ಥಿಯೇಟರ್ ನಲ್ಲಿ ನೋಡಲು ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!