2.85 ಲಕ್ಷ ಮೌಲ್ಯದ ಮಾವಾ ಜಪ್ತಿ

269

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಅಕ್ರಮವಾಗಿ ಮಾವಾ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಬರೋಬ್ಬರಿ 2.85 ಲಕ್ಷ ಮೌಲ್ಯದ ಮಾವಾ ವಶ ಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಮಾವಾ ತಯಾರಿಕೆಗೆ ಸಂಬಂಧಿಸಿದ ವಸ್ತುಗಳುನ್ನ ಸಹ ವಶಕ್ಕೆ ಪಡೆಯಲಾಗಿದೆ.

ತಿಕೋಟಾ ಗ್ರಾಮದ ಬಡಕಲ್ಲ ಓಣಿ ಹಾಗೂ ಗೌಡರ ಓಣಿಯಲ್ಲಿ ಅಕ್ರಮವಾಗಿ ಮಾವಾ ತಯಾರಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಮೂವರನ್ನ ಬಂಧಿಸಿದ್ದಾರೆ.

ಮದರಸಾಬ್ ಹಾಜಿಲಾಲ್ ಮಡ್ಡಿಮನಿ, ಅಬ್ದುಲ್ ಕರಿಂ ಸಾಹಿಹುಸೇನ್ ಬಡಕಲ್, ಮುಬಾರಕ್ ಗೌಸಪಾಕ್ ಬಡಕಲ್ ಬಂಧಿತರು ಆರೋಪಿಗಳಾಗಿದ್ದಾರೆ. ಬಂಧಿತರಿಂದ‌ 10 ಸಾವಿರ ಮೌಲ್ಯದ 5 ಕೆಜಿ ಮಾವಾ, ಅಡಿಕೆ, 185 ಕೆಜಿ ಕಚ್ಚ ವಸ್ತು, ಎರಡು ಮಿಕ್ಸರ್ ರಬ್ಬರ್ ಪ್ಯಾಕೇಜ್ ಸೇರಿದಂತೆ 2.85 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದಿದ್ದು, ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!