ಹರಿಯಾಣ, ಮಹಾರಾಷ್ಟ್ರ ಎಲೆಕ್ಷನ್ ಬಹಿರಂಗ ಪ್ರಚಾರ ಅಂತ್ಯ

423

ನವದೆಹಲಿ/ಮುಂಬೈ: ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಇಂದು ಮತ್ತೆ ನಾಳೆ ಮನೆ, ಮನೆಗೆ ತೆರಳಿ ಮತಬೇಟೆ ಕೆಲಸ ನಡೆಯಲಿದೆ.

ಅಕ್ಟೋಬರ್ 21ರಂದು ಹರಿಯಾಣ ಮತ್ತು ಮಹಾರಾಷ್ಟ್ರದ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಹೀಗಾಗಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಸಂಜೆಯಿಂದಲೇ ಮನೆ ಮನೆ ಪ್ರಚಾರ ಕಾರ್ಯ ಶುರುವಾಗಿದೆ. ಅಕ್ಟೋಬರ್ 24ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಇನ್ನು 17 ರಾಜ್ಯಗಳ 51 ವಿಧಾನಸಭೆಯ ಉಪ ಚುನಾವಣೆ ಹಾಗೂ ಬಿಹಾರದ ಸಮಿಸ್ಠಿಪುರ, ಮಹಾರಾಷ್ಟ್ರದ ಸತಾರಾ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದೆ. ಉತ್ತರ ಪ್ರದೇಶ 11, ಕೇಳರ 5, ಗುಜರಾತ್ 6, ಪಂಚಾಬ್ 4, ಸಿಕ್ಕಿಂ 3, ಅಸ್ಸಾಂ, ತಮಿಳುನಾಡು, ರಾಜಸ್ಥಾನ, ಹಿಮಾಚಲ ಪ್ರದೇಶನ ತಲಾ 2 ವಿಧಾನಸಭಾ ಕ್ಷೇತ್ರಗಳ ಸ್ಥಾನಗಳಿಗೆ ಎಲೆಕ್ಷನ್ ನಡೆಯಲಿದೆ.  ತೆಲಂಗಾಣ, ಒಡಿಶಾ, ಮಧ್ಯಪ್ರದೇಶ, ಮೇಘಾಲಯ, ಛತ್ತಿಸಗಡ, ಪಾಂಡಿಚೇರಿ ಹಾಗೂ ಅರುಣಾಚಲ ಪ್ರದೇಶನ ತಲಾ ಒಂದು ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!