ಭೂತದ ‘ಮನೆ ಮಾರಲು’ ಬರ್ತಿದ್ದಾರೆ..

394

ಸ್ಯಾಂಡಲ್ ವುಡ್ ಅಂಗಳದಲ್ಲಿ ಕಾಮಿಡಿ, ಹಾರರ್ ಸಿನ್ಮಾಗಳಿಗೇನು ಬರವಿಲ್ಲ. ಈ ರೀತಿಯ ಕಥಾ ಹಂದರವಿರುವ ಸಿನ್ಮಾಗಳು ಸಾಕಷ್ಟು ಬಂದಿವೆ. ಸಕ್ಸಸ್ ಸಹ ಕಂಡಿವೆ. ಆ ಸಾಲಿಗೆ ಇದೀಗ ಮನೆ ಮಾರಾಟಕ್ಕಿದೆ ಅನ್ನೋ ಸಿನ್ಮಾ ಸೇರಿಕೊಳ್ಳುತ್ತಿದೆ.

ಕಾಮಿಡಿ ನಟರಾದ ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ ಹಾಗೂ ರವಿಶಂಕರಗೌಡ ಮುಖ್ಯಭೂಮಿಕೆಯ ಚಿತ್ರ ಸಂಪೂರ್ಣ ಮನರಂಜನೆ ನೀಡಲು ನವೆಂಬರ್ 15ರಂದು ತೆರೆಗೆ ಬರ್ತಿದೆ. ಹಾಸ್ಯದ ಜೊತೆಗೆ ಹಾರರ್ ಕಥೆ ಹೇಳ್ತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಶ್ರಾವಣಿ ಸುಬ್ರಹ್ಮಣ್ಯ, ಪಟಾಕಿ, ಶ್ರೀಕಂಠ ಅನ್ನೋ ಯಶಸ್ವಿ ಚಿತ್ರಗಳನ್ನ ನೀಡಿದ ನಿರ್ದೇಶಕ ಮಂಜು ಸ್ವರಾಜ್, ಮನೆ ಮಾರಲು ರೆಡಿಯಾಗಿದ್ದಾರೆ. ಈಗಾಗ್ಲೇ ಟ್ರೇಲರ್ ಭರ್ಜರಿಯಾಗಿ ಸೌಂಡ್ ಮಾಡಿದ್ದು, ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗ್ತಿದೆ. ನಟಿ ಶ್ರುತಿ ಹರಿಹರನ್ ಹಾಗೂ ಕಾರುಣ್ಯ ರಾಮ ನಾಲ್ವರು ನಟರೊಂದಿಗೆ ಮನೆ ಮಾರಲು ಬರ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!