‘ಮಹಾ’ ನೆಲದಲ್ಲಿ ರಾಷ್ಟ್ರಪತಿ ಆಳ್ವಿಕೆ ಶುರು

323

ಮುಂಬೈ/ನವದೆಹಲಿ: ಇಂದು ಸಂಜೆಯಿಂದ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ. ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರ್ ಕೇಂದ್ರಕ್ಕೆ ಶಿಫಾರಸು ಮಾಡಿದ್ರು. ಹೀಗಾಗಿ ಕೇಂದ್ರ ಸಚಿವ ಸಂಪುಟ ಮಾಡಿದ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಸಹಿ ಹಾಕಿದ್ದಾರೆ.

ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರ್

ಬಿಜೆಪಿ ಹಾಗೂ ಶಿವಸೇನೆ ನಡುವಿನ ಮೈತ್ರಿಯ ಹಗ್ಗಜಟ್ಟಾದ ಪರಿಣಾಮ ಸಾಕಷ್ಟು ಬೆಳವಣಿಗೆಗಳು ನಡೆದ್ವು. ಇದ್ರಿಂದಾಗಿ, ಸಂವಿಧಾನದ ಆಶಯಗಳಂತೆ ಸರ್ಕಾರ ರಚನೆ ಮಾಡುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಸಂವಿಧಾನದ 356ನೇ ವಿಧಿ ಅನ್ವಯ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿ ಪತ್ರ ಕಳಿಸಿತ್ತು. ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗಸಭೆಗೆ ಬ್ರೆಜಿಲ್ ಗೆ ಹೋಗುವ ಕೊನೆಯ ಕ್ಷಣದಲ್ಲಿ ಸಚಿವ ಸಂಪುಟ ಸಭೆ ನಡೆಯ್ತು. ಸಚಿವ ಸಂಪುಟ ಶಿಫಾರಸಿಗೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ

288 ಶಾಸಕರ ಬಲದ ಮಹಾರಾಷ್ಟ್ರದಲ್ಲಿ 105 ಬಿಜೆಪಿ ಹಾಗೂ 56 ಶಿವಸೇನೆ ಶಾಸಕರನ್ನ ಹೊಂದಿದೆ. ಚುನಾವಣೆ ಪೂರ್ವ ಮೈತ್ರಿ ಪ್ರಕಾರ ಸರ್ಕಾರ ರಚನೆಗೆ ಇವರಿಗೆ ಅವಕಾಶವಿದ್ರೂ, ಅಧಿಕಾರಕ್ಕಾಗಿ ಕಚ್ಚಾಡಿದ ಪರಿಣಾಮ ಹೈಡ್ರಾಮಾ ನಡೆಯಿತು. ಬಿಜೆಪಿ ತೊರೆದು ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲವನ್ನ ಶಿವಸೇನೆ ಕೋರಿತು. ಎನ್ ಸಿಪಿ ಹಾಗೂ ಕಾಂಗ್ರೆಸ್ 98 ಸದಸ್ಯರನ್ನ ಹೊಂದಿವೆ. ಈ ಎರಡು ಪಕ್ಷಗಳು ಸಹ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ಸರ್ಕಾರ ರಚನೆ ಮಾಡಲು ತಮ್ಗೆ ಅವಕಾಶ ಕೊಡಿಯೆಂದು ಶಿವಸೇನೆ ನಿಯೋಗ ನಿನ್ನೆ ಸಂಜೆ ರಾಜ್ಯಪಾಲರ ಬಳಿ ತೆರಳಿತ್ತು. ಅಲ್ದೇ 48 ಗಂಟೆಗಳ ಸಮಾಯವಕಾಶ ಕೋರಿತ್ತು. ಇದಕ್ಕೆ ರಾಜ್ಯಪಾಲರು ಒಪ್ಪಿರಲಿಲ್ಲ.

ಶಿವಸೇನೆ ಸಿದ್ಧಾಂತ, ಅಜೆಂಡಾ ಎನ್ ಸಿಪಿ ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆಯಾಗುವುದು ದೂರದ ಮಾತು. ಅಲ್ದೇ, ಎನ್ ಸಿಪಿ ಮುಖ್ಯಸ್ಥ ಶರದ ಪವಾರ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ ಎಂದಿದ್ರು. ಇಲ್ಲಿ ಕಾಂಗ್ರೆಸ್ ಒಪ್ಪಿಗೆಯಿಲ್ಲದೆ ಎನ್ ಸಿಪಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಇವರಿಬ್ಬರು ಸಹ ಮೈತ್ರಿಮಾಡಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮ ಇಂದು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಬಂದಿದೆ.




Leave a Reply

Your email address will not be published. Required fields are marked *

error: Content is protected !!