ಮಾಧ್ಯಮ ಅಸ್ತ್ರ ಮಾಡಿಕೊಳ್ಳಬಾರದು: ಡಾ.ರಮೇಶ ಕತ್ತಿ

429

ಸಿಂದಗಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ‘ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ’ ಅನ್ನೋ ಕಾರ್ಯಕ್ರ ಆಯೋಜಿಸಲಾಗಿತ್ತು. ಸಿದ್ಧಲಿಂಗ ಚೌಧರಿ ಅವರ ಮನೆಯಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನ, ಆಲಮೇಲ ತಾಲೂಕು ಕಸಾಪ ಘಟಕದ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಡಾ. ರಮೇಶ ಕತ್ತಿ ಉದ್ಘಾಟಿಸಿದ್ರು.

ಕಾರ್ಯಕ್ರಮ ಉದ್ಘಾಟಿಸಿ ಮಾತ್ನಾಡಿದ ಡಾ.ರಮೇಶ ಕತ್ತಿ, ಸಾಹಿತ್ಯದೊಂದಿಗೆ ತಮ್ಮ ಒಡನಾಟ, ಸಂಘಟನಾತ್ಮಕ ಕೆಲಸ ಹಾಗೂ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಬಗೆಯನ್ನ ವಿವರಿಸಿದ್ರು. ಸಾಹಿತಿ ಹೆಚ್ಚು ಸಂಘಟನೆಯಲ್ಲಿ ತೊಡಗಿಸಿಕೊಂಡಷ್ಟು ಆತನ ಬರವಣಿಗೆ ಮೇಲೆ ಪರಿಣಾಮ ಬೀರುತ್ತೆ ಅಂತಾ ಹೇಳಿದ್ರು. ಪತ್ರಕರ್ತರು ತಮ್ಮ ವೃತ್ತಿಯನ್ನ ಅಸ್ತ್ರವಾಗಿ ಬಳಸಬಾರದು. ಯಾಕಂದ್ರೆ, ಅದು ಮುಂದೊಂದು ದಿನ ನಮ್ಗೂ ತಿರುಗುಬಾಣವಾಗುತ್ತೆ ಅನ್ನೋ ಕಿವಿ ಮಾತು ಹೇಳಿದ್ರು.

‘ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ’ವನ್ನ ತಮ್ಮ ಮನೆಯ ಮೂಲಕವೇ ಶುರು ಮಾಡಿದ ಕಸಾಪ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಮಾತ್ನಾಡಿ, ಪ್ರತಿ 15 ದಿನಗಳಿಗೊಮ್ಮೆ ಒಬ್ಬೊಬ್ಬರ ಮನೆಯಲ್ಲಿ ಕಾವ್ಯ ವಾಚನ ಕಾರ್ಯಕ್ರಮ ಮಾಡಲಾಗುತ್ತೆ. ಈ ಮುಖೇನ ಕನ್ನಡ ಸಾಹಿತ್ಯ ಹಾಗೂ ಭಾಷೆಯನ್ನ ಇನ್ನಷ್ಟು ಗಟ್ಟಿಗೊಳಿಸಲಾಗುತ್ತೆ ಅಂತಾ ಹೇಳಿದ್ರು. ಇದೇ ವೇಳೆ ಏಳು ಜನರನ್ನ ಸನ್ಮಾನಿಸಲಾಯ್ತು.

ಯು.ಐ ಶೇಕ ಅಧ್ಯಕ್ಷತೆ, ಮುಖ್ಯ ಅತಿಥಿಯಾಗಿ ಸಿದ್ದರಾಮ ಬಿರಾದಾರ ವಹಿಸಿಕೊಂಡಿದ್ರು. ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪತ್ರಕರ್ತ ನಿಂಗರಾಜ ಅತ್ನೂರ ಹಾಗೂ ಈರಣ್ಣ ರೇವೂರ ಉಪಸ್ಥಿತಿಯಿದ್ರು. ಡಾ.ಪ್ರಕಾಶ ಪ್ರಾರ್ಥನಾ ಗೀತೆ ಹಾಡಿದ್ರು. ಅಶೋಕ ಬಿರಾದಾರ ಪ್ರಾಸ್ತಾವಿಕವಾಗಿ ಮಾತ್ನಾಡಿದ್ರು. ಬಸವರಾಜ ಅಗಸರ ನಿರೂಪಿಸಿದ್ರು. ಆನಂದ ಶಾಬಾದಿ ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!