ಮಂಗಳೂರು, ದಾವಣಗೆರೆಯಲ್ಲಿ ಮತದಾನ ಬಿರುಸು

334

ಮಂಗಳೂರು/ದಾವಣಗೆರೆ: ಈ ಎರಡು ಜಿಲ್ಲೆಗಳ ಮಹಾನಗರ ಪಾಲಿಕೆ ಸೇರಿದಂತೆ ಒಟ್ಟು 14 ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಬಿರುಸಿನಿಂದ ಕೂಡಿದೆ. ಬೆಳಗ್ಗೆಯಿಂದಲೇ ಮತದಾರರು ವೋಟ್ ಹಾಕಲು ಬೂತ್ ಕಡೆ ಹೆಜ್ಜೆ ಹಾಕ್ತಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ ಗಳಿಗೆ ಮತದಾನ ಶುರುವಾಗಿದೆ. ಲೇಡಿಹಿಲ್ ನ ಸಂತ ಅಲೋಶಿಯಸ್ ಸ್ಕೂಲ್ ಹಾಗೂ ಗಾಂಧಿನಗರ ಶಾಲೆ ಸೇರಿದಂತೆ 448 ಕಡೆ ಬೂತ್ ತೆರೆಯಲಾಗಿದೆ. 28 ಅತಿ ಸೂಕ್ಷ್ಮ ಹಾಗೂ 67 ಸೂಕ್ಷ್ಮ ಮತಗಟ್ಟೆ ಪ್ರದೇಶಗಳೆಂದು ಜಿಲ್ಲಾಡಳಿತ ಗುರುತಿಸಿದೆ. 27 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 180 ಅಭ್ಯರ್ಥಿಗಳು ಫೈಟ್ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ವೋಟ್ ಮಾಡಿದ್ದಾರೆ. ನವೆಂಬರ್ 14ಕ್ಕೆ ಫಲಿತಾಂಶ ಬರಲಿದೆ.

ಇನ್ನು ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದೆ. 377 ಮತಗಟ್ಟೆಗಳನ್ನ ಓಪನ್ ಮಾಡಲಾಗಿದೆ. ಬಿಜೆಪಿ 45, ಕಾಂಗ್ರೆಸ್ 44, ಜೆಡಿಎಸ್ 23, ಸಿಪಿಐ 6 ಅಭ್ಯರ್ಥಿಗಳು ಸೇರಿದಂತೆ ಒಟ್ಟು 208ಜನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಲ್ಲಿಯೂ ಬೆಳಗ್ಗೆ 8 ಗಂಟೆಯಿಂದ ಮತದನಾ ಪ್ರಕ್ರಿಯೆ ಜೋರಿನಿಂದ ಕೂಡಿದೆ.




Leave a Reply

Your email address will not be published. Required fields are marked *

error: Content is protected !!