ಒಂದು ಸಾವಿನ ಹಿಂದೆ ಹಲವು ಕಥೆ

247

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಮಕ್ಕಳ ಕಳ್ಳರು ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಚರ್ಚೆಯಾಗುತ್ತಿದೆ. ಜನರು ಸಹ ಅಲ್ಲಲ್ಲಿ ಅಪರಿಚಿತರ ಮೇಲೆ ಗಂಭೀರ ಪ್ರಮಾಣದ ಹಲ್ಲೆ ಮಾಡಿರುವ ಪ್ರಕರಣಗಳು ಸಹ ಬೆಳಕಿಗೆ ಬರುತ್ತಿವೆ. ಆದರೆ, ಈ ಬಗ್ಗೆ ಪೊಲೀಸ್ ಇಲಾಖೆ ಆಗಲಿ, ಸಚಿವರಾಗಲಿ, ಸರ್ಕಾರವಾಗಲಿ ಗಮನ ಹರಿಸುತ್ತಿಲ್ಲ. ಈಗ ಇದೆ ವಿಚಾರಕ್ಕೆ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬನ ಜೀವ ಹೋಗಿದೆ.

ರಾಮಮೂರ್ತಿ ನಗರದಲ್ಲಿ ಕನ್ನಡ ಭಾಷೆ ಬರದ ವ್ಯಕ್ತಿಯೊಬ್ಬನನ್ನು ಮಕ್ಕಳ ಕಳ್ಳನೆಂದು ಸ್ಥಳೀಯರು ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಾದ ಮೇಲೆ ಆತ ಕೆ.ಆರ್ ಪುರಂ ಹತ್ತಿರ ಶವವಾಗಿ ಪತ್ತೆಯಾಗಿದ್ದಾನೆ. ಇದು ಲಾಕಪ್ ಡೆತ್ ಅನ್ನೋ ಅನುಮಾನ ಮೂಡಿದೆ. ಈ ಅನುಮಾನ ಸುಳ್ಳು ಎನ್ನುತ್ತಿದೆ ಠಾಣೆಯಲ್ಲಿ ಸಿಸಿಟಿವಿ ದೃಶ್ಯಗಳು.

ಜಾರ್ಖಂಡ್ ಮೂಲದ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆತನ ಹೆಸರು ಸಂಜಯ್. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ. ಆತನು ಸಹ ರಾಮಮೂರ್ತಿ ನಗರದಲ್ಲೇ ವಾಸವಾಗಿದ್ದ. ಈ ಬಗ್ಗೆ ಪರಿಶೀಲಿಸಿ ಠಾಣೆಯಲ್ಲಿ ದೂರು ದಾಖಲಿಸುವಂತೆ ಪೊಲೀಸರು ಹೇಳಿದ್ದಾರೆ. ಆತ ಬೇಡ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮರು ದಿನ ಕೆ.ಆರ್ ಪುರಂ ಹತ್ತಿರದ ಐಟಿಐ ಕಾಂಪೌಂಡ್ ಬಳಿ ಈತನ ಶವ ಪತ್ತೆಯಾಗಿದೆ. ಈ ಬಗ್ಗೆ ಕೆ.ಆರ್ ಪುರ ಪೊಲೀಸರು ತನಿಖೆ ನಡೆಸಿದಾಗ ಹಲ್ಲೆಯಿಂದಾಗಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈಗ ಫಯಾಜ್ ಪಾಷಾ, ಸೈಯದ್ ಖಾಜ್ ಪಾರ್ತಿಭನ್ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಒಟ್ಟಿನಲ್ಲಿ ಅನ್ಯಾಯವಾಗಿ ಸಂಜಯ್ ಎಂಬಾತನ ಸಾವು ಹಲವು ಕಥೆಗಳನ್ನು ಹೇಳುತ್ತಿದೆ.




Leave a Reply

Your email address will not be published. Required fields are marked *

error: Content is protected !!