ವಿಮಾನದಲ್ಲಿ ಮದುವೆ: ಎಲ್ಲರೂ ಮೇಲೂ ಕೇಸ್!

348

ಪ್ರಜಾಸ್ತ್ರ ಸುದ್ದಿ

ಮಧುರೈ: ಕರೋನಾ ಮಾರ್ಗಸೂಚಿ ನಿಯಮ ಉಲ್ಲಂಘನೆ ಅಡಿಯಲ್ಲಿ ವಿಮಾನದಲ್ಲಿ ಮದುವೆಯಾದ ಜೋಡಿ ಸೇರಿದಂತೆ ಎಲ್ಲರ ವಿರುದ್ಧ ದೂರು ದಾಖಲಿಸಲಾಗ್ತಿದೆ. ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನದಲ್ಲಿ ಮೇ 23ರಂದು ಮದುವೆ ನಡೆದಿದೆ. ಇದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ ಟೀಕಿಸಿದ ಬೆನ್ನಲ್ಲೇ ಕ್ರಮ ತೆಗೆದುಕೊಳ್ಳುವುದಾಗಿ ಸ್ಪೈಸ್ ಜೆಟ್ ಸಂಸ್ಥೆ ತಿಳಿಸಿದೆ. ಅಲ್ದೇ ತನಿಖೆಗೆ ಆದೇಶಿಸಿದೆ. ಪ್ರಯಾಣದ ವೇಳೆ ಕೋವಿಡ್ ಮಾರ್ಗಸೂಚಿ ಅನುಸರಿಸುವಂತೆ ಹೇಳಿತ್ತು. ಇನ್ನು ಮದುವೆ ಬಗ್ಗೆ ಮಾಹಿತಿ ಇರ್ಲಿಲ್ಲ ಎಂದು ಹೇಳ್ತಿದ್ದಾರೆ. ಸಿಬ್ಬಂದಿ ಸೇರಿದಂತೆ ಇವರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪೈಸ್ ಜೆಟ್ ಸಂಸ್ಥೆ ಹೇಳಿದೆ.




Leave a Reply

Your email address will not be published. Required fields are marked *

error: Content is protected !!