ಜಾತಿ ಗಣತಿ ಮತ್ತು ರಾಜಕೀಯ

137

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇದೀಗ ಜಾತಿ ಗಣತಿ ಚರ್ಚೆ ಜೋರಾಗಿದೆ. ಅವೈಜ್ಞಾನಿಕವಾಗಿರುವ ಜಾತಿ ಗಣತಿ ವರದಿಯನ್ನು ತಿರಸ್ಕರಿಸಿ ಎಂದು ಒಕ್ಕಲಿಗ ಸಂಟಘಟನೆ ವತಿಯಿಂದ ಎಲ್ಲ ಪಕ್ಷಗಳಲ್ಲಿರುವ ರಾಜಕೀಯಕರು ಸಹಿ ಹಾಕಿ ಸಿಎಂಗೆ ಸಲ್ಲಿಸಿದ್ದಾರೆ. ಇದರಲ್ಲಿ ಆಡಳಿತ ಪಕ್ಷ, ವಿಪಕ್ಷದ ನಾಯಕರು ಇದ್ದಾರೆ.

ಒಂದು ಕಡೆ ಸಿಎಂ ಸಿದ್ದರಾಮಯ್ಯ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ನಾನು ಸ್ವೀಕರಿಸುವ ನಿರ್ಧಾರ ಅಚಲ ಎನ್ನುತ್ತಾರೆ. ಮತ್ತೊಂದು ಕಡೆ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ ಕೈನಲ್ಲಿರುವ ಒಕ್ಕಲಿಗ ನಾಯಕರು ಹಿಂದುಳಿದ  ವರ್ಗಗಳ ಆಯೋಗ ನಡೆಸಿರುವ ಅವೈಜ್ಞಾನಿಕ ವರದಿ ಸ್ವೀಕರಿಸಬೇಡಿ ಎಂದು ಸಹಿ ಸಹ ಮಾಡಿದ್ದಾರೆ. ಇದರಿಂದ ದಶಕಗಳಿಂದ ಮೋಸ ಹೋಗುತ್ತಿರುವ ತಳಸಮುದಾಯಗಳಿಗೆ ಮತ್ತೊಂದು ಅಡ್ಡಗಾಲು ಎದುರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಪಂಚರಾಜ್ಯಗಳ ಚುನಾವಣೆಯಲ್ಲಿ ನೋಡಿದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರದಲ್ಲಿಯೂ ಕಾಂಗ್ರೆಸ್ ಗೆ ಅಧಿಕಾರ ನೀಡಿದರೆ ದೇಶದಲ್ಲಿ ಜಾತಿ ಗಣತಿ ಮಾಡುತ್ತೇವೆ ಎನ್ನುತ್ತಾರೆ. ಇಲ್ಲಿ ನೋಡಿದರೆ ಅದೇ ಕಾಂಗ್ರೆಸ್ಸಿನಲ್ಲಿರುವ ಒಕ್ಕಲಿಗ ನಾಯಕರು ತಕರಾರರು ತೆಗೆದಿದ್ದಾರೆ. ಬಹಿರಂಗವಾಗಿ ಒಬ್ಬರಿಗೊಬ್ಬರು ಅತ್ಯಂತ ಕೀಳು ಮಾತುಗಳಿಂದ ಆರೋಪಗಳನ್ನು  ಮಾಡುವ ರಾಜಕೀಯ ನಾಯಕರು ಈ ವಿಚಾರದಲ್ಲಿ ಒಟ್ಟಾಗಿ ಸಹಿ ಹಾಕಿ ಸರಿಯಾದ ರೀತಿಯಲ್ಲಿ ಜಾತಿ ಗಣತಿ ಮಾಡಿಸಿ ಎನ್ನುತ್ತಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್, ಮಾನ್ಯ ಸಿದ್ದರಾಮಯ್ಯನವರೆ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ವರದಿ ಸ್ವೀಕಾರದ ವಿಚಾರದಲ್ಲಿ ನೀವು ದಿಕ್ಕೊಂದು ನಿಲುವು ತಾಳುವುದನ್ನು ನಿಲ್ಲಿಸಿ. ವರದಿ ಸ್ವೀಕರಿಸುವ ವಿಚಾರದಲ್ಲಿ ನನ್ನ ನಿಲುವು ಅಚಲ ಎಂದು ಪ್ರತಿಪಾದಿಸುತ್ತಲೇ ನೀವು ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ ಎಂದು ಕಿಡಿ ಕಾರಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ವರ್ಗಗಳ ದಶಕಗಳ ಕನಸು ನನಸಾಗುವುದು ಅಸಾಧ್ಯವೆಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!