ನಾಳೆ ‘ಮಾಯಾ ಬಜಾರ್’ನಲ್ಲಿ ‘ಆನೆಬಲ’ ಪ್ರದರ್ಶನ

356

ಸ್ಯಾಂಡಲ್ ವುಡ್ ಅಂಗಳದಲ್ಲಿ ಪ್ರತಿ ಶುಕ್ರವಾರ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಸ್ಟಾರ್ ನಟರ ಜೊತೆಗೆ ಹೊಸಬರ ಚಿತ್ರಗಳು ಪೈಪೋಟಿಗೆ ಇಳಿಯುತ್ತವೆ. ಅದೇ ರೀತಿ ನಾಳೆ ಮಾಯಾ ಬಜಾರ್ ಹಾಗೂ ಆನೆಬಲ ಅನ್ನೋ ಎರಡು ಹೊಸಬರ ಚಿತ್ರಗಳು ರಿಲೀಸ್ ಆಗ್ತಿವೆ.

ಪವರ್ ಸ್ಟಾರ್ ಪುನೀತರಾಜಕುಮಾರ ಅವರ ಪಿಆರ್ ಕೆ ಬ್ಯಾನರ್ ನಲ್ಲಿ ಮಾಯಾ ಬಜಾರ್ 2016 ಮೂವಿ ಬರ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಮೊದಲ ಚಿತ್ರವಿದು. ವಶಿಷ್ಠಸಿಂಹ, ರಾಜ ಬಿ ಶೆಟ್ಟಿ, ಚೈತ್ರಾರಾವ, ಅಚ್ಯುತಕುಮಾರ, ಸುಧಾರಾಣಿ, ಪ್ರಕಾಶ ರಾಜ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರದ ಸಾಂಗ್ ವೊಂದರಲ್ಲಿ ವಿಶೇಷ ಅತಿಥಿಯಾಗಿ ಪುನೀತ ಬಂದು ಹೋಗ್ತಾರೆ. ಎ.ಹರ್ಷ ಕೊರಿಯೋಗ್ರಫಿ ಮಾಡಿದ್ದಾರೆ. ಇದು ನಾಳೆ ತೆರೆಗೆ ಬರ್ತಿದೆ.

ಇನ್ನು ಅಪ್ಪಟ ಹಳ್ಳಿ ಸೊಗಡಿನ, ಯುವಪಡೆಯ ಆನೆಬಲ ಚಿತ್ರ ರಿಲೀಸ್ ಆಗ್ತಿದೆ. ಸೊನಗಹಳ್ಳಿ ರಾಜು ನಿರ್ದೇಶನದ ಚಿತ್ರದಲ್ಲಿ ಸಾಗರ, ರಕ್ಷಿತ, ಮುತ್ತುರಾಜು, ಉದಯ ಶ್ವೇತಾ, ಹರೀಶ ಶೆಟ್ಟಿ, ಗೌತಮ, ಮಲ್ಲರಾಜು ಸೇರಿದಂತೆ ಸಂಪೂರ್ಣವಾಗಿ ಹೊಸಬರಿಂದ ಕೂಡಿರುವ ಚಿತ್ರವಾಗಿದೆ.

ಎ.ವಿ ವೇಣುಗೋಪಾಲ ಅಡಕಮಾರನಹಳ್ಳಿಯ ಜನತಾ ಟಾಕೀಸ್ ಸಂಸ್ಥೆ ಮೂಲಕ ನಿರ್ಮಾಣವಾಗಿರುವ ಚಿತ್ರಕ್ಕೆ ಯೋಗರಾಜ ಭಟ ಹಾಗೂ ವಿ.ನಾಗೇಂದ್ರ ಪ್ರಸಾದ ಸಾಹಿತ್ಯ ಬರೆದಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಎರಡು ಚಿತ್ರಗಳು ನಾಳೆ ರಿಲೀಸ್ ಆಗ್ತಿವೆ.




Leave a Reply

Your email address will not be published. Required fields are marked *

error: Content is protected !!