ಮಾಯಾಬಜಾರ್ 2016 ಟೀಸರ್ ಮತ್ತು ಮೋದಿ ಧ್ವನಿ…

400

ಪವರ್ ಸ್ಟಾರ್ ಪುನೀತರಾಜಕುಮಾರ ಹೋಂ ಬ್ಯಾನರ್ ನಲ್ಲಿ ಮಾಯಾಬಜಾರ್ 2016 ಅನ್ನೋ ಸಿನ್ಮಾ ರೆಡಿಯಾಗ್ತಿದೆ. ಅದರ ಟೀಸರ್ ನಿನ್ನೆ ಸಂಜೆ ರಿಲೀಸ್ ಆಗಿದೆ. ಟೀಸರ್ ನೋಡಿದ ಫ್ಯಾನ್ಸ್ ಸಾಕಷ್ಟು ಕಾಮೆಂಟ್ಸ್ ಮಾಡಿದ್ದಾರೆ.

ಟೀಸರ್ ನೋಡಿದ್ಮೇಲೆ ಪ್ರತಿಯೊಬ್ಬರಿಗೂ ಅನಿಸಿದ್ದು ನೋಟ್ ಬ್ಯಾನ್ ಕುರಿತು ಸಿನ್ಮಾ ಇದೆ ಅಂತಾ. ಶುರುವಿನಲ್ಲಿಯೇ ಸಸ್ಪೆನ್ಸ್ ಥ್ರಿಲ್ಲರ್ ಅನ್ನೋ ರೀತಿಯಲ್ಲಿ ಟೀಸರ್ ಓಪನ್ ಆಗುತ್ತೆ. ಇದರ ಜೊತೆಗೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೋಟ್ ಬ್ಯಾನ್ ಅನೌನ್ಸ್ ಮಾಡಿದ ಧ್ವನಿ ಬರುತ್ತೆ. ಕೊನೆಯಲ್ಲಿ 500, 1000 ನೋಟ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವಲ್ಲಿ ಎಂಡ್ ಆಗುತ್ತೆ.

ಪಿಆರ್ ಕೆ ಬ್ಯಾನರ್ ನಲ್ಲಿ ಬರ್ತಿರುವ ಮೂವಿಯಲ್ಲಿ ನಟ ರಾಜ ಬಿ ಶೆಟ್ಟಿ, ಪ್ರಕಾಶ ರೈ, ಅಚ್ಯುತಕುಮಾರ, ಸುಧಾರಾಣಿ, ವಶಿಷ್ಠ ಸಿಂಹ ಸೇರಿದಂತೆ ಅನೇಕರು ನಟಿಸಿದ್ದಾರೆ. ರಾಧಾಕೃಷ್ಣ ರೆಡಿ ಆ್ಯಕ್ಷನ್ ಕಟ್ ಹೇಳ್ತಿದ್ದು, ಅಶ್ವಿನಿ ಪುನೀತರಾಜಕುಮಾರ ಹಾಗೂ ಎಂ ಗೋವಿಂದ ನಿರ್ಮಾಣ ಮಾಡ್ತಿದ್ದಾರೆ. ಈ ಸಿನ್ಮಾ ಡಿಸೆಂಬರ್ ನಲ್ಲಿ ರಿಲೀಸ್ ಆಗ್ತಿದೆ.




Leave a Reply

Your email address will not be published. Required fields are marked *

error: Content is protected !!