ಉಚಿತ ಹಲ್ಲು ತಪಾಸಣೆ ಹಾಗೂ ಹಲ್ಲು ಸೆಟ್ ವಿತರಣೆ

496

ಮಂಡ್ಯ: ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಉಚಿತ ಹಲ್ಲು ತಪಾಸಣೆ ಹಾಗೂ ಹಲ್ಲು ಸೆಟ್ ವಿತರಿಸಲಾಯ್ತು. 60 ವರ್ಷ ಮೇಲ್ಪಟ್ಟವರಿಗೆ ದಂತಭಾಗ್ಯ ಯೋಜನೆ ಅಡಿಯಲ್ಲಿ ಈ ಸೇವೆ ಸಲ್ಲಿಸಲಾಗಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತ್ನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಚೇಗೌಡ ಅವರು, ಮಾನವನ ದೇಹದಲ್ಲಿ  ಪಚನಕ್ರಿಯೆ ಚೆನ್ನಾಗಿಯಾಗಲು ಹಲ್ಲುಗಳು ಬಹಳ ಮುಖ್ಯ. ನಾವು ಸೇವಿಸುವ ಆಹಾರವನ್ನ ಸರಿಯಾಗಿ ಅಗಿದು ತಿನ್ನುವುದ್ರಿಂದ ಪಚನಕ್ರಿಯೆ ಚೆನ್ನಾಗಿಯಾಗಿ, ಆರೋಗ್ಯ ವೃದ್ಧಿಯಾಗುತ್ತದೆ ಅಂತಾ ಸಲಹೆ ನೀಡಿದ್ರು.

ಕೃಷ್ಣರಾಜಪೇಟೆಯ ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಜಯಪ್ರಕಾಶ, ದಂತವೈದ್ಯರಾದ ಡಾ.ಪುಟ್ಟಸ್ವಾಮಿ, ಕಿಕ್ಕೇರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಸುಪ್ರೀತ, ಬೂಕನಕೆರೆ ಸಾರ್ವಜನಿಕ ಆಸ್ಪತ್ರೆಯ ಡಾ.ಅರುಣಾನಂದ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಂ, ಹಿರಿಯ ಆರೋಗ್ಯ ನಿರೀಕ್ಷಕ ಶೀಳನೆರೆ ಸತೀಶ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!