ಸೋಲಿನ ಬೆನ್ನಲ್ಲೇ ಧೋನಿಗೆ ಮತ್ತೊಂದು ಶಾಕ್

283

ಪ್ರಜಾಸ್ತ್ರ ಕ್ರೀಡಾಸುದ್ದಿ

ಐಪಿಎಲ್ ಟಿ-20 2021ನೇ ಸಾಲಿನ ಟೂರ್ನಿಯ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಕ್ಯಾಪ್ಟನ್ ಎಂ.ಎಸ್ ಧೋನಿಗೆ ಇದೀಗ ಮತ್ತೊಂದು ಶಾಕ್ ನೀಡಲಾಗಿದೆ.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕೆ ಧೋನಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ನಿಗದಿತ ಸಮಯಕ್ಕೆ ಆಟ ಮುಗಿಯದ ಕಾರಣ, ಐಪಿಎಲ್ ಆಯೋಜಕರು ನೋಟಿಸ್ ನೀಡಿದ್ದಾರೆ. ಇದರ ಜೊತೆಗೆ ಸಿಎಸ್ಕೆ ತಂಡದ ನಾಯಕನಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಈ ಪಂದ್ಯದಲ್ಲಿ ಧೋನಿ ಡಕ್ ಔಟ್ ಆಗಿದ್ರು.




Leave a Reply

Your email address will not be published. Required fields are marked *

error: Content is protected !!