ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಬಸ್ ಮೇಲೆ ಗುಂಡಿನ ದಾಳಿ

400

ಅಂತಾರಾಷ್ಟ್ರೀಯ ಸುದ್ದಿ

ಕೊಲಂಬೊ: ಶ್ರೀಲಂಕಾದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಹೀಗಾಗಿ ಬಸ್ ಗಳ ಮೂಲಕ ಮತದಾರರನ್ನ ಕರೆದುಕೊಂಡು ಹೋಗಲಾಗ್ತಿತ್ತು. ಈ ವೇಳೆ ಗುಂಡಿನ ದಾಳಿ ನಡೆಸಲಾಗಿದೆ.

ಬೆಳಗ್ಗೆಯಿಂದಲೇ ವೋಟಿಂಗ್ ಕಾರ್ಯ ನಡೆದಿದೆ. ಮತದಾರರು ಬೂತ್ ಗಳತ್ತ ಬರ್ತಿದ್ದಾರೆ. ಇದರ ನಡುವೆ ವಾಯ್ಯು ಭಾಗದಲ್ಲಿ ಅಲ್ಪಸಂಖ್ಯಾತರ ಬಸ್ ಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ಬಂದ್ ಮಾಡಿದ್ದಾರೆ. ಈ ವೇಳೆ ಬರೋಬ್ಬರಿ 100 ಬಸ್ ಗಳು ಸಾಲಾಗಿ ನಿಂತಿವೆ. ಆಗ ಅಡಗಿ ಕುಳಿತಿದ್ದ ಹಂತಕರು ಗುಂಡಿನ ದಾಳಿ ನಡೆಸಿದ್ದಾರೆ.

ಅದೃಷ್ಟವಷಾತ್ ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎರಡ್ಮೂರು ಬಸ್ ಗಳಿಗೆ ಒಂದಿಷ್ಟು ಹಾನಿಯಾಗಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ. ಇದರ ಹಿಂದೆ ಇರೋದು ಯಾರು ಅನ್ನೋದು ಸಧ್ಯಕ್ಕೆ ತಿಳಿದು ಬಂದಿಲ್ಲ.




Leave a Reply

Your email address will not be published. Required fields are marked *

error: Content is protected !!