ಕಾಣೆಯಾಗಿದ್ದ ಮಗು ದಿಢೀರ್ ಪತ್ತೆ

336

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಇಲ್ಲಿನ ಕೀಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಾಪತ್ತೆಯಾಗಿದ್ದ 40 ದಿನದ ಮಗು ಇಂದು ಬೆಳಗ್ಗೆ ದಿಢೀರ್ ಪತ್ತೆಯಾಗಿದೆ. ಸಲ್ಮಾ ಹಾಗೂ ಹುಸೇನ್ ಸಾಬ್ ಶೇಖ್ ಎಂಬುವರ ಮಗು ನಾಪತ್ತೆಯಾಗಿತ್ತು. ತಕ್ಷಣ ಎಲ್ಲ ಸಿಸಿಟಿವಿಗಳ ಪರಿಶೀಲನೆ ಕೆಲಸ ಶುರುವಾಯಿತು.

ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದರು. ಕೀಮ್ಸ್ ಆಸ್ಪತ್ರೆಯಲ್ಲಿರುವ 300ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳ ತಪಾಸಣೆ ನಡೆಸಲಾಯಿತು. ಆದರೆ, ಎಲ್ಲಿಯೂ ಮಗು ತೆಗೆದುಕೊಂಡು ಹೋದವರ ಸುಳಿವು ಸಿಗಲಿಲ್ಲ. ಹೀಗಾಗಿ ಹೆತ್ತವರು ರಾತ್ರಿಯೆ ಮನೆಗೆ ಹೋಗಿದ್ದರು.

ಇಂದು ಮುಂಜಾನೆ ಸುಮಾರು 6.30ರ ಸಮಯದಲ್ಲಿ ಮಗು ಗೇಟ್ ಹತ್ತಿರ ಪತ್ತೆಯಾಗಿದೆ. ಮಗುವಿನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ರಾತ್ರಿ ಸೊಳ್ಳೆ ಕಚ್ಚಿರುವುದು ಬಿಟ್ಟರೆ ಮತ್ತೇನೂ ಇಲ್ಲವೆಂದು ವೈದ್ಯರು ಹೇಳಿದ್ದಾರೆ. ಮಗುವನ್ನು 48 ಗಂಟೆಗಳ ಕಾಲ ನಿಗಾ ಘಟಕದಲ್ಲಿ ಇರಿಸಲಾಗಿದೆ. ಹೀಗಾಗಿ ಕುಟುಂಬಸ್ಥರಿಗೆ ಮಗುವನ್ನು ನೀಡಿಲ್ಲ.

ಇದೆಲ್ಲದರ ನಡುವೆ ಮಗು ನಾಪತ್ತೆ ಹಿಂದೆ ಹೆತ್ತವರ ಕೈವಾಡವೇ ಇದೇನಾ ಅನ್ನೋ ಅನುಮಾನ ಮೂಡಿದೆ. ಯಾವ ಸಿಸಿಟಿವಿಯಲ್ಲಿ ಕಳ್ಳರ ಪತ್ತೆಯಾಗಿಲ್ಲ. ಮಗು ಕಳೆದುಕೊಂಡ ಪೋಷಕರು ರಾತ್ರಿಯೇ ಮನೆಗೆ ಹೋಗಿದ್ದಾರೆ. ಮುಂಜಾನೆ 6.30ಕ್ಕೆ ಫೋನ್ ಮಾಡಿದರೆ ಬಂದಿರೋದು 9 ಗಂಟೆಗಂತೆ. ಹೀಗಾಗಿ ಹಲವು ಅನುಮಾನಗಳು ಮೂಡಿವೆ. ಅತ್ತ ತಾಯಿ, ತಂದೆ ಮಗು ಸಿಕ್ಕಿರುವುದಕ್ಕೆ ಖುಷಿಯಾಗಿದ್ದು, ನಮ್ಮ ಮಗು ನಮಗೆ ಕೊಡಿ ಅಂತಿದ್ದಾರೆ. ಹೀಗಾಗಿ ಈ ಘಟನೆ ಹಲವು ಅನುಮಾನಗಳನ್ನು ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!