ಪ್ರಜಾಸ್ತ್ರ ಸುದ್ದಿ
ನವದೆಹಲಿ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಏಪ್ರಿಲ್ 21ರಂದು ಆಸ್ಸಾಂ ಪೊಲೀಸರು ಬಂಧಿಸಿದ್ದರು. ಇಂದು ಆಸ್ಸಾಂ ಸ್ಥಳೀಯ ಕೋರ್ಟ್ ಜಾಮೀನು ನೀಡಿದೆ.
ಎರಡು ಕೋಮುಗಳ ನಡುವೆ ಗಲಭೆ ಸೃಷ್ಟಿಸುವಂತಹ ಟ್ವೀಟರ್ ಪೋಸ್ಟ್ ಗಳನ್ನು ಹಂಚಿಕೊಂಡಿದ್ದರು ಅನ್ನೋ ಕಾರಣಕ್ಕೆ ಇವರನ್ನು ಬಂಧಿಸಲಾಗಿತ್ತು. ಇದು ಗುಜರಾತ್ ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.