ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಕಳೆದ ಹಲವು ದಿನಗಳಿಂದ ರಮೇಶ ಜಾರಿಕಿಹೊಳಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ರು. ಇದೀಗ ಯೂಟರ್ನ್ ಹೊಡೆದಿದ್ದು, ರಾಜೀನಾಮೆ ವಿಚಾರ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.
ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ಮಾತ್ನಾಡಿದ ಅವರು, ಹಿತೈಷಿಗಳು ಹಾಗೂ ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ಕೊಟ್ಟಿದ್ದಾರೆ. ಅವರ ಸಲಹೆ ಆಧರಿಸಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದರು. ನಾನು ಬೆಂಗಳೂರು, ಮುಂಬೈಗೆ ಹೋಗಿದ್ದೆ. ಸುದ್ದಿಗೋಷ್ಠಿ ಮಾಡುವ ಸಂದರ್ಭ ಬಂದಿಲ್ಲ. ನಾನು ಒಂಟಿಯಾಗುವ ಪ್ರಶ್ನೆಯೇ ಇಲ್ಲ ಅಂತಾ ಹೇಳಿದರು.