ಚಿಂತಕರ ಛಾವಡಿ ಆಗಬೇಕಿದ್ದ ಪರಿಷತ್ ಫೈಟ್ ವಿಧಾನಸಭೆ ಆಗಿ ಹೋಯ್ತು..!

188

ಪ್ರಜಾಸ್ತ್ರ ಸುದ್ದಿ ವಿಶೇಷ

ಬೆಂಗಳೂರು: ರಾಜ್ಯದಲ್ಲಿ ಇದೀಗ ವಿಧಾನ ಪರಿಷತ್ ಚುನಾವಣೆ ಕಾವು ಜೋರಾಗಿದೆ.‌ ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಆದರೆ, ಈಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ ಜಾತಿ, ಪ್ರಾದೇಶಿಕ, ಸಾಮಾಜಿಕ ಸೇರಿದಂತೆ ರಾಜಕೀಯ ಹಿನ್ನೆಲೆ ಇಲ್ಲದವರಿಗೆ ನೀಡಬೇಕಾದ ಜಾಗದಲ್ಲಿ ಎಲ್ಲವರೂ ಅವರೆ ತುಂಬಿಕೊಂಡಿದ್ದಾರೆ.

ಒಕ್ಕಲಿಗರು 15, ಲಿಂಗಾಯತ 13, ಹಿಂದುಳಿದ 9 ಅಭ್ಯರ್ಥಿಗಳು ಬಿಟ್ಟರೆ ಎಸ್ಸಿ, ಎಸ್ಟಿ, ಮುಸ್ಲಿಂ ಸೇರಿದಂತೆ ಇತರೆ ಸಮುದಾಯಗಳ ಅಭ್ಯರ್ಥಿಗಳು ಇರುವುದು ಒಬ್ಬೊಬ್ಬ ಅಭ್ಯರ್ಥಿ. ಪರಿಷತ್ ಚುನಾವಣೆ ಅನ್ನೋದು ರಾಜಕೀಯ ಕ್ಷೇತ್ರದಲ್ಲಿ ಇರದೆ ಸಾಹಿತ್ಯ, ಸಿನಿಮಾ, ಕ್ರೀಡೆ, ಶಿಕ್ಷಣ, ಉದ್ಯಮ, ವೈದ್ಯಕೀಯ ಸೇರಿದಂತೆ ಹೀಗೆ ನಾನಾ ಕ್ಷೇತ್ರದ ಸಾಧಕರನ್ನು ಸ್ಪರ್ಧಿಸಬೇಕು ಅನ್ನೋ ಉದ್ದೇಶವಿದೆ. ಇದರಿಂದ ಆಯಾ ಕ್ಷೇತ್ರದ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯ. ಆದರೆ, ಚಿಂತಕರ ಛಾವಡಿ ಆಗಬೇಕಿದ್ದ ಪರಿಷತ್ ಸಹ ವಿಧಾನಸಭೆ ತರ ಆಗಿದ್ದು ನಿಜಕ್ಕೂ ದುರಂತ.




Leave a Reply

Your email address will not be published. Required fields are marked *

error: Content is protected !!