ನವದೆಹಲಿ: ಬ್ಯಾಂಕ್ ಖಾತೆ ಹೊಂದಿದ ಗ್ರಾಹಕರಿಗೆ ಇದೊಂದು ಎಚ್ಚರಿಕೆಯಾಗಿದೆ ಅಂತಾ ಹೇಳಬಹುದು. 2020 ಜನವರಿಯೊಳಗೆ ನಿಮ್ಮ ಅಕೌಂಟ್ ಕೆವೈಸಿ ಅಪ್ಡೇಟ್ ಮಾಡಿಸಬೇಕು ಅಂತಾ ಆರ್ ಬಿಐ ಸೂಚನೆ ನೀಡಿದೆ.
ಒಂದು ವೇಳೆ ಕೆವೈಸಿ ಅಪ್ಡೇಟ್ ಮಾಡಿಸ್ಲಿಲ್ಲಂದ್ರೆ ನಿಮ್ಮ ಅಕೌಂಟ್ ಕ್ಯಾನ್ಸಲ್ ಮಾಡಲಾಗುತ್ತೆ. ಅಕೌಂಟ್ ದುರ್ಬಳಕೆ, ವಂಚನೆ ತಡೆಯುವುದು, ಆನ್ ಲೈನ್ ವ್ಯವಹಾರ ಹೆಚ್ಚಾಗಿರುವುದ್ರಿಂದ, ಗ್ರಾಹಕರ ಹಿತದೃಷ್ಟಿಯಿಂದ ಅವರ ಮಾಹಿತಿ ಪಡೆದುಕೊಳ್ಳಲು ಆರ್ ಬಿಐ ಸೂಚಿಸಿದೆ.
ಬ್ಯಾಂಕ್ ಗಳಲ್ಲಿ ಅಕೌಂಟ್ ಹೊಂದಿದವರು ಜನವರಿ 1, 2020ರ ಒಳಗೆ ಕೆವೈಸಿ ಮಾಡಿಸಬೇಕು. ಪೇಟಿಎಂ, ಫೋನ್ ಪೇ ಬಳಕೆ ಮಾಡ್ತಿರುವವರು ಫೆಬ್ರುವರಿ 29ರೊಳಗೆ ಕೆವೈಸಿ ಮಾಡಿಸಬೇಕು. ಇದು ಸಾಧ್ಯವಾಗದೆ ಹೋದ್ರೆ, ನಿಮ್ಮ ಅಕೌಂಟ್ ರದ್ದು ಮಾಡುವ ಸಾಧ್ಯತೆಯಿದೆ.