ಮತದಾನದ ವೇಳೆ ಫೋಟೋ: 2 ಮತಗಳು ಅಸಿಂಧು

205

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಮತದಾನ ನಡೆದಿದೆ. ಇಂದು ಅದರ ಮತ ಎಣಿಕೆ ಕಾರ್ಯ ನಡೆದಿದೆ. ಈ ವೇಳೆ ಎರಡು ಮತಗಳನ್ನು ಅಸಿಂಧುಗೊಳಿಸಲಾಗಿದೆ. ಇದಕ್ಕೆ ಕಾರಣ ಗೌಪ್ಯ ಮತದಾನದ ವಿರುದ್ಧ ನಡೆದುಕೊಂಡಿರುವುದು.

ಇಬ್ಬರು ವ್ಯಕ್ತಿಗಳು ಮತ ನೀಡುವ ಸಂದರ್ಭದಲ್ಲಿ ಫೋಟೋ ತೆಗೆದು ಅದನ್ನು ಪದರ್ಶಿಸಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗಾಗಿ ಚುನಾವಣೆ ಆಯೋಗದ ತನಕ ಹೋಗಿ, ಇಂದು ಮತ ಎಣಿಕೆ ಸಂದರ್ಭದಲ್ಲಿ ಅಧಿಕಾರಿಗಳು ಪಕ್ಷಗಳ ಏಜೆಂಟರ್ ಸಮ್ಮುಖದಲ್ಲಿ ಎರಡು ಮತಗಳನ್ನು ಅಸಿಂಧುಗೊಳಿಸಿದರು.




Leave a Reply

Your email address will not be published. Required fields are marked *

error: Content is protected !!