ಅಜ್ಜಿಗೆ 1 ಲಕ್ಷ ವಿದ್ಯುತ್ ಬಿಲ್: ಸಮಸ್ಯೆ ಸುಖಾಂತ್ಯ

153

ಪ್ರಜಾಸ್ತ್ರ ಸುದ್ದಿ

ಕೊಪ್ಪಳ: ತಗಡಿನ ಶೆಡ್ ನಲ್ಲಿದ್ದ ಅಜ್ಜಿ ಮನೆಗೆ 1 ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯುತ್ ಬಿಲ್ ಬಂದಿತ್ತು. ಇದನ್ನು ನೋಡಿದ ಅಜ್ಜಿ ಕಂಗಾಲಾಗಿದ್ದರು. ಈ ವಿಚಾರ ಎಲ್ಲ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ, ಜೆಸ್ಕಾಂ ಅಧಿಕಾರಿಗಳು ಬಗೆಹರಿಸಿದ್ದಾರೆ.

ಹೌದು, ಭಾಗ್ಯನಗರದಲ್ಲಿ ವಾಸವಾಗಿರುವ ಅಜ್ಜಿ ಗಿರಿಜಮ್ಮ ಇರುವುದು ತಗಡಿನ ಶೆಡ್ಡಿನಲ್ಲಿ. ಇರುವುದು ಎರಡು ಬಲ್ಪ್ ಮಾತ್ರ. ಇದನ್ನು ಬಿಟ್ಟರೆ ಬೇರೆ ಎಲೆಕ್ಟ್ರಿಕ್ ವಸ್ತುಗಳೇ ಇಲ್ಲ. ಹೀಗಿರುವಾಗ ಈ ಅಜ್ಜಿ ಮನೆಗೆ 1 ಲಕ್ಷದ 3 ಸಾವಿರದ 315 ರೂಪಾಯಿ ವಿದ್ಯುತ್ ಬಿಲ್ ಬಂದಿದೆ.

ಜೆಸ್ಕಾಂ ಇಂಜಿನಿಯರ್ ಈ ಸಮಸ್ಯೆಯನ್ನು ಬಗೆಹರಿಸಿದ್ದಾರೆ. 2021ರಿಂದ ಮೀಟರ್ ರೀಡಿಂಗ್ ಸಮಸ್ಯೆಯಾಗಿದೆ. ಹೀಗಾಗಿ ಅಷ್ಟೊಂದು ಬಿಲ್ ಬಂದಿದೆ. ನಮ್ಮಿಂದ ತಪ್ಪಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಅಜ್ಜಿಯ ಸಮಸ್ಯೆ ಬಗೆಹರಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!