ನೂತನ ಶಾಸಕರಿಗೆ ಶಿಬಿರ: ಧಾರ್ಮಿಕ ಗುರುಗಳ ಆಹ್ವಾನಕ್ಕೆ ವಿರೋಧ

127

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವವರಿಗೆ ನಿಯಮಾವಳಿಗಳ ಕುರಿತು ಹಿರಿಯ ರಾಜಕೀಯ ನಾಯಕರಿಂದ ಮಾರ್ಗದರ್ಶನ ನೀಡುವುದು, ಪ್ರಕೃತಿ ಚಿಕಿತ್ಸೆ ಹಾಗೂ ಧಾರ್ಮಿಕ ಗುರುಗಳಿಂದ ನೀತಿ ಪಾಠ ನೀಡಲು ಸರ್ಕಾರ ಮುಂದಾಗಿದೆ.

ನೆಲಮಂಗಲದ ಕ್ಷೇಮವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಜೂನ್ 26ರಿಂದ 28ರ ತನಕ ಮೂರು ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿದೆ. ಕುರಿತು ಸ್ಪೀಕರ್ ಯು.ಟಿ ಖಾದರ್ ಮಾಹಿತಿ ಹಂಚಿಕೊಂಡಿದ್ದಾರೆ. ಧಾರ್ಮಿಕ ಗುರುಗಳಿಗೆ ಆಹ್ವಾನ ನೀಡಿರುವುದು ಈಗ ವಿರೋಧ ವ್ಯಕ್ತವಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ರಾಜಯೋಗಿನಿ ಬ್ರಹ್ಮಕುಮಾರಿಯ ಆಶಾ ದೀದಿ, ಜಮಾತೆ ಇಸ್ಲಾಮಿ ಹಿಂದ್ ನ ಮಹಮ್ಮದ್ ಕುಂಙ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರಿಗೆ ಆಹ್ವಾನ ನೀಡಿರುವುದು ಹಲವರ ವಿರೋಧಕ್ಕೆ ಕಾರಣವಾಗಿದೆ.

ಆಹ್ವಾನ ನೀಡಿರುವ ಧಾರ್ಮಿಕ ಗುರುಗಳು ಬಿಜೆಪಿ ಪಕ್ಷಕ್ಕೆ ಹತ್ತಿರವಾಗಿದ್ದಾರೆ. ಗುರುರಾಜ್ ಕರ್ಜಗಿ ಅವರು ಕಾಂಗ್ರೆಸ್ ಗ್ಯಾರೆಂಟಿಗಳ ವಿರುದ್ಧ ಲೇಖನ ಬರೆದವರು, ಮಹಮ್ಮದ್ ಕುಂಙ ಮೂಲಭೂತವಾದಿ ಸಂಘಟನೆ ನಾಯಕರಾಗಿದ್ದಾರೆ. ಈ ಎಲ್ಲ ಕಾರಣಕ್ಕೆ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಸರ್ಕಾರ ಏನು ಉತ್ತರಿಸುತ್ತೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!