ಹೆಲ್ತ್ ಬುಲೆಟಿನ್: 26 ಹೊಸ ಪ್ರಕರಣ, 1 ಸಾವು

367

ಬೆಂಗಳೂರು: ಮುಂಜಾನೆ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಇಂದು ಮತ್ತೆ 26 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿನ ಸಂಖ್ಯೆ 951 ಆಗಿದೆ. ಅಲ್ಲಿಗೆ ಕರ್ನಾಟಕದಲ್ಲಿಯೂ ಸಹ ಸೋಂಕಿತರ ಸಂಖ್ಯೆ ಸಾವಿರ ಗಡಿಗೆ ಬಂದಿದೆ.

ಇನ್ನು ಕಲಬುರಗಿಯ 60 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 32 ಆಗಿದೆ. ಮೇ 11ರಂದು ಪೆಸೆಂಟ್ ನಂಬರ್ 927 ವ್ಯಕ್ತಿ ಸಾವನ್ನಪ್ಪಿದ್ದ, ಅದು ಕರೋನಾ ಪಾಸಿಟಿವ್ ಕೇಸ್ ಅನ್ನೋದು ಇಂದು ದೃಢಪಟ್ಟಿದೆ.

ಬೀದರ 11, ಹಾಸನ 4, ವಿಜಯಪುರ 2, ಕಲಬುರಗಿ 2,  ದಾವಣಗೆರೆ 2, ಉತ್ತರ ಕನ್ನಡ 2, ದಕ್ಷಿಣ ಕನ್ನಡ, ಬಳ್ಳಾರಿ ಹಾಗೂ ಬೆಂಗಳೂರು  ತಲಾ 1 ಹೊಸ ಪ್ರಕರಣ ದಾಖಲಾಗಿದೆ. ಅಲ್ಲಿಗೆ ಒಟ್ಟು 26 ಹೊಸ ಕೇಸ್ ಆಗಿದೆ.




Leave a Reply

Your email address will not be published. Required fields are marked *

error: Content is protected !!