ಸಿಂದಗಿಯಲ್ಲಿ ಪತ್ನಿ ಹತ್ಯೆ ಮಾಡಿ ಸೂಸೈಡ್ ಮಾಡಿಕೊಂಡ ಪತಿ

1330

ಸಿಂದಗಿ/ಆಲಮೇಲ: ಹೆಂಡ್ತಿಯನ್ನ ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

25 ವರ್ಷದ ಯಲ್ಲವ್ವ ಪೂಜಾರಿ ಕೊಲೆಯಾದ ದುರ್ದೈವಿ. ಇನ್ನು ಪತಿ 35 ವರ್ಷದ ಹಣಮಂತ ಪೂಜಾರಿ ಹತ್ಯೆ ಮಾಡಿ ತಾನು ನೇಣು ಹಾಕಿಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ. ಹೆಂಡ್ತಿಯ ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ.

3 ವರ್ಷದ ಮಗು ಅಳುವುದನ್ನ ಕೇಳಿದ ಬಳಿಕ ನೆರೆಯವರು ಬಂದು ಬಾಗಿಲು ತೆಗೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!