ದಸರಾದಲ್ಲಿ ‘ಮಹಾ’ ಸಿಎಂ ಪತ್ನಿ ಗಾಯನ

378

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ನೋಡಲು ದೇಶ ವಿದೇಶಗಳಿಂದ ಜನಸಾಗರ ಹರಿದು ಬರುತ್ತೆ. 9 ದಿನಗಳ ಹಬ್ಬದಲ್ಲಿ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದರಲ್ಲಿ ಸಂಗೀತ ಕಾರ್ಯಕ್ರಮ ಸಹವಿರುತ್ತೆ. ಈ ಬಾರಿಯ ದಸರಾ ಸಂಭ್ರಮದಲ್ಲಿ ಮಹಾರಾಷ್ಟ್ರದ ಸಿಎಂ ಪತ್ನಿ ಹಾಡಲಿದ್ದಾರೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ತಮ್ಮ ಗಾಯನಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ರು ಎಂದು ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಇದಕ್ಕೆ ಸರ್ಕಾರದಿಂದ ಒಪ್ಪಿಗೆ ನೀಡಲಾಗಿದ್ದು, ಅವರೊಬ್ಬರನ್ನೇ ಬರಲು ಹೇಳಲಾಗಿದೆ. ಪತಿ ಫಡ್ನಾವಿಸ್ ಬಂದ್ರೆ ಭದ್ರತೆಯ ಸಮಸ್ಯೆ ಆಗುತ್ತೆ. ಹೀಗಾಗಿ ನೀವೊಬ್ಬರಿಗೆ ಬನ್ನಿ ಎಂದು ತಿಳಿಸಲಾಗಿದೆಯಂತೆ.




Leave a Reply

Your email address will not be published. Required fields are marked *

error: Content is protected !!