ಪ್ರತಿಭಟನೆಗೆ 2009ರ ಆದೇಶ ಕಡ್ಡಾಯ

354

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿತ್ಯ ಒಂದಲ್ಲ ಒಂದು ಪ್ರತಿಭಟನೆ, ಧರಣಿ, ಹೋರಾಟ ಅಂತೆಲ್ಲ ಇದ್ದೆ ಇರುತ್ತೆ. ಮೊದ್ಲೇ ಟ್ರಾಫಿಕ್ ಸಮಸ್ಯೆಯಿಂದ ಕಂಗಾಲಾಗಿರುವ ಬೆಂಗಳೂರಿನಲ್ಲಿ ಪ್ರತಿಭಟನೆ ಅಂದ್ರೆ ಸಾಕು ಜನ ಬೆಚ್ಚಿ ಬೀಳ್ತಾರೆ. ಹೀಗಾಗಿ ಪೊಲೀಸ್ರು 2009ರ ಆದೇಶವನ್ನ ಕಟ್ಟುನಿಟ್ಟಾಗಿ ತರಲು ನಿರ್ಧಾರಿಸಿದ್ದಾರೆ.

ಸಭೆ, ಮೆರವಣಿಗೆ ಅನುಮತಿ ಮತ್ತು ನಿಯಂತ್ರಣ ಆದೇಶ 2009ನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಬೆಂಗಳೂರು ಪೊಲೀಸ್ರು ಮುಂದಾಗಿದ್ದಾರೆ. ಇದರ ಪ್ರಕಾರ ಪ್ರತಿಭಟನೆ ನಡೆಸುವ ಸಂಘಟನೆಗಳು, ಸಂಘ ಸಂಸ್ಥೆಗಳು ಸೇರಿದಂತೆ ಯಾರೇ ಆಗ್ಲಿ 7 ದಿನ ಮೊದ್ಲೇ ಅನುಮತಿ ಪಡೆಯುವುದು ಕಡ್ಡಾಯವೆಂದು ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದ ನಿಗದಿತ ಅರ್ಜಿಗಳು ನಗರದ ಎಲ್ಲ ಠಾಣೆಗಳಲ್ಲಿ ಲಭ್ಯವಿರುವಂತೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!