ರಾಷ್ಟ್ರೀಯ ಸಂವಿಧಾನ ದಿನ ಆಚರಣೆ

438

ನವದೆಹಲಿ: ಇಂದು ದೇಶದ ತುಂಬ ಸಂವಿಧಾನ ದಿನ ಆಚರಣೆ ಮಾಡಲಾಗ್ತಿದೆ. ನವೆಂಬರ್ 26, 1949ರಂದು ದೇಶಕ್ಕೆ ಸಂವಿಧಾನವನ್ನ ಅಳವಡಿಸಿಕೊಂಡ ದಿನ. ಹೀಗಾಗಿ ನವೆಂಬರ್ 26ನ್ನ ರಾಷ್ಟ್ರೀಯ ಸಂವಿಧಾನ ದಿನವಾಗಿ ಆಚರಿಸಲಾಗ್ತಿದೆ.

ಸುಮಾರು 2 ವರ್ಷ 11 ತಿಂಗಳು 17 ದಿನವನ್ನ ಇದಕ್ಕಾಗಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸೇವೆ ಸಲ್ಲಿಸಿದ್ದಾರೆ. ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಅತೀ ದೊಡ್ಡ ಸಂವಿಧಾನ ನಮ್ಮದು. ಹೀಗಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಮುಂಬೈನಲ್ಲಿ ಅಂಬೇಡ್ಕರ್ ಅವರ ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡುವಾಗ ಪ್ರಧಾನಿ ಮೋದಿ, ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿದ್ರು.

ಹೀಗೆ ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಶಾಲಾ, ಕಾಲೇಜುಗಳಲ್ಲಿ ಸಂವಿಧಾನ ದಿನವನ್ನ ಆಚರಣೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಅರಿವು ಮೂಡಿಸಲಾಗ್ತಿದೆ.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!