ಧ್ವಜ ಸಂಹಿತೆ ಮರೆತ ಗಬಸಾವಳಗಿ ಗ್ರಾಮ ಪಂಚಾಯ್ತಿ!

416

ಸಿಂದಗಿ: ದೇಶ ಮತ್ತು ರಾಷ್ಟ್ರಧ್ವಜದ ವಿಚಾರ ಬಂದಾಗ ಪ್ರತಿಯೊಬ್ಬರು ಗೌರವ ಕೊಡಬೇಕು. ನಮ್ಮ ಬಾವುಟದ ಬಗ್ಗೆ ಗೌರವ, ಅಭಿಮಾನ ಅನ್ನೋದು ಹಳ್ಳಿ ಹಳ್ಳಿಯಿಂದಲೇ ಶುರುವಾಗಬೇಕೆಂದು ಈ ಹಿಂದಿನ ಸರ್ಕಾರ ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿ ಮೇಲೆ ಪ್ರತಿದಿನ ರಾಷ್ಟ್ರಧ್ವಜ ಹಾರಿಸಬೇಕೆಂದು ಆದೇಶಿ ಹೊರಡಿಸಿದೆ.

ಹಿಂದಿನ ಸರ್ಕಾರದ ಆದೇಶದಂತೆ ವಿಜಯಪುರ ಜೀಲ್ಲೆ ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮ ಪಂಚಾಯ್ತಿ ಕಚೇರಿ ಮೇಲೆ ಬಾವುಟ ಹಾರಿಸಲಾಗ್ತಿದೆ. ಆದ್ರೆ, ನಮ್ಮ ಭಾರತೀಯರ ಹೆಮ್ಮೆಯ ಸಂಕೇತವಾಗಿರುವ ರಾಷ್ಟ್ರಧ್ವಜದ ಬಣ್ಣ ಮಾಸಿ ಹೋಗಿ ಯಾವ ಕಾಲವಾಗಿದೆಯೋ ಗೊತ್ತಿಲ್ಲ. ಕೇಸರಿ ಬಳಿ ಬಣ್ಣ ಒಂದೆಯಾಗಿದೆ. ಹಸಿರು ಬಣ್ಣವೊಂದು ಮಾತ್ರ ಕಾಣಿಸುತ್ತೆ. ಅದನ್ನೇ ನಿತ್ಯ ಧ್ವಜಾರೋಹಣ ಮಾಡಲಾಗ್ತಿದೆ.

73ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿ ಕೇವಲ ಒಂದು ವಾರವಾಗಿದೆ. ಅಷ್ಟರಲ್ಲಿಯೇ ಬಣ್ಣ ಮಾಸಿದ ರಾಷ್ಟ್ರಧ್ವಜ ಹಾರಾಡ್ತಿದೆ. ಗ್ರಾಮ ಪಂಚಾಯ್ತಿ ಸಿಬ್ಬಂದಿಯ ಬೇಕಾಬಿಟ್ಟಿ ಧ್ವಜಾರೋಹಣದಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಯಾಕಂದ್ರೆ, ನಿತ್ಯ ಗೌರವದಿಂದ ಧ್ವಜಾರೋಹಣ ಮಾಡುವುದು ಮತ್ತು ಸಂಜೆ ಅದನ್ನ ಕೆಳಗೆ ಇಳಿಸುವುದಕ್ಕೆ ಭತ್ತೆ ಸಹ ನಿಗದಿ ಮಾಡಲಾಗಿದೆ.

ಧ್ವಜ ಸಂಹಿತೆ ಬಗ್ಗೆ ಎಷ್ಟೊಂದು ಎಚ್ಚರವಹಿಸಬೇಕಾದ ಅಧಿಕಾರಿಗಳು, ಸಿಬ್ಬಂದಿಯ ಬೇಜವಾಬ್ದಾರಿಯ ನಡೆಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗ್ತಿದೆ. ಈಗ್ಲಾದ್ರೂ ಗಬಸಾವಳಿಗಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಾಗಿದೆ.




Leave a Reply

Your email address will not be published. Required fields are marked *

error: Content is protected !!