ಹೊಸ ವರ್ಷಕ್ಕೆ ವೆಬ್ ಸಿರೀಸ್ ಟೈಟಲ್ ಲಾಂಚ್

286

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಪತ್ರಕರ್ತರು ಹಾಗೂ ಸಿನಿಮಾ ರಂಗದ ಬಗ್ಗೆ ಆಸಕ್ತಿ ಇರುವ ಗೆಳೆಯರ ತಂಡವೊಂದು ಸೇರಿಕೊಂಡು ವೆಬ್ ಸಿರೀಸ್ ಮಾಡಲು ರೆಡಿಯಾಗಿದೆ. ಹೊಸ ವರ್ಷದಂದು ವೆಬ್ ಸಿರೀಸ್ ಟೈಟಲ್ ರಿಲೀಸ್ ಮಾಡುವ ಮೂಲಕ ಸ್ಯಾಂಡಲ್ ವುಡ್ ಎಂಟ್ರಿ ಪಡೆಯಲು ಸಿದ್ಧವಾಗಿದೆ.

ನಟ, ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಹಾಫ್ ಚಿತ್ರದ ಸಹಕಾರದೊಂದಿಗೆ ಬೆಂಗಳೂರಿನ ಸೂರ್ಯ ಮಿನಿ ಥಿಯೇಟರ್ ಅಂಗಳದಲ್ಲಿ ಟೈಟಲ್ ಲಾಂಚ್ ಮಾಡಲಾಗ್ತಿದೆ. ಜನವರಿ 1,2021ರ ಸಂಜೆ 4 ಗಂಟೆಗೆ ಟೈಟಲ್ ಲಾಂಚ್ ಮಾಡಲಾಗ್ತಿದೆ.

ರಂಗಭೂಮಿ ನಿರ್ದೇಶಕ ಯಶವಂತ ಕಾರ್ಗಳ್ಳಿ ಅವರು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬರಹಗಾರ ನಾಗೇಶ ತಳವಾರ ಚಿತ್ರಕಥೆ ಹಾಗೂ ಸಾಹಿತ್ಯದ ಜೊತೆಗೆ ಸಂಭಾಷಣೆಯನ್ನ ಸಹ ಬರೆಯುತ್ತಿದ್ದಾರೆ. ಉಳಿದಂತೆ ಟೆಕ್ನಿಕಲ್ ಕೆಲಸ ಸೇರಿದಂತೆ ಪ್ರೀ ಪ್ರೊಡೆಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲಿ ಫಸ್ಟ್ ಫೋಸ್ಟರ್ ಸಹ ರಿಲೀಸ್ ಮಾಡುವುದಾಗಿ ಚಿತ್ರ ತಂಡ ತಿಳಿಸಿದೆ. ಈ ತಂಡಕ್ಕೆ ಪ್ರಜಾಸ್ತ್ರ ವೆಬ್ ಪತ್ರಿಕೆ ಮೀಡಿಯಾ ಪಾಟ್ನರ್ ನೀಡುವ ಮೂಲಕ ಜೊತೆಯಾಗಿದೆ.




Leave a Reply

Your email address will not be published. Required fields are marked *

error: Content is protected !!