ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಗಮನಕ್ಕೆ

660

ಬೆಂಗಳೂರು: ಇದೀಗ ಎಲ್ಲೆಡೆ ಪರೀಕ್ಷೆಯ ಓದು ಜೋರಾಗಿದೆ. ಪೂರ್ವ ಸಿದ್ಧತಾ ಪರೀಕ್ಷೆಯ ಜೊತೆಗೆ ವಾರ್ಷಿಕ ಪರೀಕ್ಷೆಯ ತಯಾರಿಯನ್ನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮಾಡ್ತಿದ್ದಾರೆ. ಇದರ ಜೊತೆಗೆ ಪುನರಾವರ್ತಿತ ವಿದ್ಯಾರ್ಥಿಗಳು ಸಹ ಪರೀಕ್ಷೆ ತಯಾರಿ ನಡೆಸಿದ್ದಾರೆ.

ಇದೀಗ ಪುನರಾವರ್ತಿತ ವಿದ್ಯಾರ್ಥಿಗಳು ತುಂಬುವ ಶುಲ್ಕದ ದಿನಾಂಕವನ್ನ ವಿಸ್ತರಣೆ ಮಾಡಲಾಗಿದೆ. ಅಕ್ಟೋಬರ್ 24ರ ತನಕ ಶುಲ್ಕ ಪಾವತಿಸಬಹುದು. ಕಾಲೇಜಿನವರು ಅಕ್ಟೋಬರ್ 25ರೊಳಗೆ ಶುಲ್ಕ ಸಂದಾಯ ಮಾಡ್ತಾರೆ. ಅಲ್ದೇ, ಅಕ್ಟೋಬರ್ 30ರೊಳಗೆ ಪರೀಕ್ಷಾ ಅರ್ಜಿಗಳನ್ನ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಸಲ್ಲಿಸಬಹುದಾಗಿದೆ.

ಇನ್ನು ಅವಧಿ ಮುಗಿದ್ಮೇಲೆ ಬಂದ ಅರ್ಜಿಗಳನ್ನ ಸ್ವೀಕರಿಸದಂತೆ ಪದವಿ ಪೂರ್ವ ಕಾಲೇಜುಗಳ ಮುಖ್ಯಸ್ಥರಿಗೆ ಖಡಕ್ ಸೂಚನೆ ನೀಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.




Leave a Reply

Your email address will not be published. Required fields are marked *

error: Content is protected !!