ಚುನಾವಣೆ ಘೋಷಣೆಗೂ ಮೊದಲು ಶೋಧನೆಯ ಅಧಿಕಾರವಿಲ್ಲ

185

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಚುನಾವಣೆ ಘೋಷಣೆಗೂ ಮೊದಲು ಅಧಿಕಾರಿಗಳಿಗೆ ಶೋಧನೆ ಮಾಡುವ ಅಧಿಕಾರವಿಲ್ಲ. ವಶಪಡಿಸಿಕೊಂಡಿರುವ ವಸ್ತುಗಳ ಕ್ರಮವನ್ನು ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಮಾರ್ಚ್ 19ರಂದು ಶಿವಾಜಿನಗರದಲ್ಲಿ ಆಹಾರ ಸಾಮಗ್ರಿ ಹಂಚಿಕೆ ವೇಳೆ ಅಧಿಕಾರಿಗಳು ದಾಳಿ ನಡೆಸಿ ವಶ ಪಡಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಇಷ್ತಿಯಾಕ್ ಅಹಮ್ಮದ್ ಎಂಬುವರು ರಿಟ್ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್, ಚುನಾವಣೆ ದಿನಾಂಕ ಘೋಷಣೆಗೂ ಮೊದಲು ವಸ್ತುಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಇಲ್ಲವೆಂದು ಆದೇಶ ನೀಡಿದೆ.

ಮಾರ್ಚ್ 29ರಂದು ಕೇಂದ್ರ ಚುನಾವಣಾ ಆಯೋಗ, ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿತು. ಅಂದಿನಿಂದ ನೀತಿಸಂಹಿತೆ ಜಾರಿಗೆ ಬಂದಿದೆ. ಇದು ಚುನಾವಣೆ ಮುಗಿಯುವ ತನಕ ಜಾರಿಯಲ್ಲಿ ಇರಲಿದೆ.




Leave a Reply

Your email address will not be published. Required fields are marked *

error: Content is protected !!