ಬಾಲಕನ ತುಟಿಗೆ ಮುತ್ತು ಪ್ರಕರಣ: ಕ್ಷಮೆಯಾಚಿಸಿದ ದಲೈ ಲಾಮಾ

245

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಾಲಕನ ತುಟಿಗೆ ಮುತ್ತು ಕೊಟ್ಟ ಪ್ರಕರಣ ಸಂಬಂಧ ಟಿಬೆಟಿಯನ್ ಆಧ್ಯಾತ್ಮಿಕ ಧರ್ಮಗುರು ದಲೈ ಲಾಮಾ ಕ್ಷಮೆಯಾಚಿಸಿದ್ದಾರೆ. ಟ್ವೀಟ್ ಮೂಲಕ ಕ್ಷಮೆ ಕೇಳಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಮಗುವಿನ ತುಟಿಗಳಿಗೆ ಮುತ್ತಿಕ್ಕಿದ ಬಳಿಕ ನಾಲಿಗೆಯನ್ನು ಹೀರುವಂತೆ ಹೇಳುವ ವಿಡಿಯೋ ವೈರಲ್ ಆಗಿದೆ. ಎಲ್ಲೆಡೆ ಜನರು ಆಕ್ರೋಶ ವ್ಯಕ್ತಪಡಿಸಿದರು. ಸಾಕಷ್ಟು ಟೀಕೆ ವ್ಯಕ್ತವಾಯಿತು. ಇದಕ್ಕೆ ಕ್ಷಮೆ ಕೇಳಿದ್ದಾರೆ. ಬಾಲಕ ಹಾಗೂ ಆತನ ಕುಟುಂಬಸ್ಥರು, ಸ್ನೇಹಿತರ ಬಳಿ ಕ್ಷಮೆ ಕೇಳುತ್ತೇನೆ. ಈ ಘಟನೆಯಿಂದ ನೋವಾಗಿದ್ದರೆ ಅವರಲ್ಲಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

ವಿಡಿಯೋ ವೈರಲ್ ಆಗಿ ತೀವ್ರ ಟೀಕೆಗಳು ಕೇಳಿ ಬಂದ ನಂತರ, ದಲೈ ಲಾಮಾ ಅವರ ಆಪ್ತರು ಇದರ ಬಗ್ಗೆ ಸ್ಪಷ್ಟನೆಯೊಂದು ನೀಡಿದ್ದಾರೆ. ಸಾಂಪ್ರದಾಯಿಕ ಟಿಬೆಟಿಯನ್ ಸಂಸ್ಕೃತಿಯಲ್ಲಿ ಇದು ಶುಭಾಶಯ ಸಂಕೇತವಾಗಿದೆ. ಗೌರವದ ಸಂಕೇತವಾಗಿದೆ. ಟಿಬೆಟಿಯನ್ ಜಾನಪದರ ಪ್ರಕಾರ 9ನೇ ಶತಮಾನದಲ್ಲಿ ಟಿಬೆಟಿಯನ್ ಕ್ರೂರ ರಾಜನ ಸಹಾಯಕರು ಕಪ್ಪು ನಾಲಿಗೆಯನ್ನು ಹೊಂದಿದ್ದರು. ಅವರಂತೆ ನಾವು ಅಲ್ಲ ಎಂದು ಹೇಳುವುದಕ್ಕಾಗಿ ನಾಲಿಗೆಯನ್ನು ಚಾಚುತ್ತಾರೆ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!