ಗ್ರೀನ್ ಝೋನ್ ಚಾಮರಾಜನಗರಕ್ಕೂ ಕರೋನಾ ಎಂಟ್ರಿ!

310

ಪ್ರಜಾಸ್ತ್ರ ಸುದ್ದಿ

ಚಾಮರಾಜನಗರ: ರಾಜ್ಯದಲ್ಲಿ ಗ್ರೀನ್ ಝೋನ್ ಎಂದು ಕರೆಸಿಕೊಂಡಿದ್ದ ಜಿಲ್ಲೆ ಚಾಮರಾಜನಗರ. ಆದ್ರೆ, ಇದೀಗ ಅದು ಮಾಯವಾಗಲಿದೆ. ಯಾಕಂದ್ರೆ, ಜಿಲ್ಲೆಯಲ್ಲಿ ಮೊದಲ ಕರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಗ್ರೀನ್ ಝೋನ್ ಜಿಲ್ಲೆಗೂ ಕರೋನಾ ಎಂಟ್ರಿಯಾಗಿದೆ.

ಮಹಾರಾಷ್ಟ್ರದಿಂದ ವಾಪಸ್ ಆಗಿದ್ದ 25 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ಸಂಜೆ ಪ್ರಕಟವಾಗುವ ಹೆಲ್ತ್ ಬುಲೆಟಿನ್ ನಲ್ಲಿ ಈ ಪ್ರಕರಣ ಸೇರಿರಲಿದೆ ಎಂದು ಹೇಳಲಾಗ್ತಿದೆ. ಮಾರ್ಚ್ ತಿಂಗಳಿನಿಂದ ಇದುವರೆಗೂ ಜಿಲ್ಲೆಯಲ್ಲಿ ಒಂದೇ ಒಂದು ಸೋಂಕು ಕಾಣಿಸಿಕೊಂಡಿರ್ಲಿಲ್ಲ. ಇದೀಗ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!