ರೋಗ ಲಕ್ಷಣವಿಲ್ಲದೆ ಶೇ.28ರಷ್ಟು ಮಂದಿಯಲ್ಲಿ ಸೋಂಕು

379

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರೋನಾ ಸೋಂಕಿನ ಲಕ್ಷಣಗಳನ್ನ ಗುರುತಿಸಲಾಗಿದ್ದು, ಆ ಲಕ್ಷಣಗಳು ಕಂಡು ಬಂದ್ರೆ ಅವರನ್ನ ಚಿಕಿತ್ಸೆಗೆ ಒಳಪಡಿಸಲಾಗುತ್ತೆ. ಆದ್ರೆ, ಇದೀಗ ಶಾಕಿಂಗ್ ನ್ಯೂಸ್ ಹೊರ ಬಿದ್ದಿದ್ದು, ದೇಶದಲ್ಲಿ ಶೇಕಡ 28ರಷ್ಟು ಜನರಲ್ಲಿ ಸೋಂಕಿನ ಲಕ್ಷಣಗಳಿಲ್ಲದೆ ಇದ್ರೂ ಅವರಲ್ಲಿ ಕರೋನಾ ಸೋಂಕು ಇರುವುದು ಬೆಳಕಿಗೆ ಬಂದಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈ ಅಂಶವನ್ನ ತಿಳಿಸಿದೆ. ಜನವರಿ 22ರಿಂದ ಏಪ್ರಿಲ್ 30ರ ತನಕ ದೇಶದಲ್ಲಿ 40,184 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಶೇಕಡ 28ರಷ್ಟು ಜನರಲ್ಲಿ ರೋಗಿನ ಲಕ್ಷಣಗಳೇ ಇಲ್ಲದಿರುವುದು ತಿಳಿದಿದೆ. ಅಲ್ದೇ, ಇದು ಇಷ್ಟಕ್ಕೆ ನಿಲ್ಲಲ್ಲ. ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

50 ರಿಂದ 65 ವರ್ಷ ಮೇಲ್ಪಟ್ಟವರಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುವುದಿಲ್ಲ. ಇನ್ನು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ ಅನ್ನೋದು ವರದಿಯಲ್ಲಿ ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!