ದೇಶದಲ್ಲಿ ಮತ್ತಷ್ಟು ಇಳಿಕೆ ಕಂಡ ಕರೋನಾ

222

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಕರೋನಾ ಸೋಂಕಿನ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ. ಈ ಮೂಲಕ ದೊಡ್ಡ ಸಮಸ್ಯೆಯೊಂದು ನಿಧಾನವಾಗಿ ಮರೆಯಾಗ್ತಿರುವುದು ಒಳ್ಳೆಯ ಲಕ್ಷಣವಾಗಿದೆ. ಕಳೆದ 24 ಗಂಟೆಯಲ್ಲಿ 67,208 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಇಲ್ಲಿಯವರೆಗೂ 2,97,00,313 ಜನರಲ್ಲಿ ದೃಢಪಟ್ಟಿದೆ.

ದೇಶದಲ್ಲಿ ಇನ್ನು 8,26,740 ಪ್ರಕರಣಗಳು ಸಕ್ರಿಯವಾಗಿವೆ. 1,03,570 ಜನರು 24ಗಂಟೆಯಲ್ಲಿ ಗುಣಮುಖರಾಗಿದ್ದು 2,84,91,670 ಜನರು ಇದುವರೆಗೂ ಚೇತರಿಸಿಕೊಂಡಿದ್ದಾರೆ. 2,330 ಜನರು ಸಾವನ್ನಪ್ಪಿದ್ದು ಮೃತಪಟ್ಟವರ ಸಂಖ್ಯೆ 3,81,903ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ 26,55,19,251 ಜನರಿಗೆ ಲಸಿಕೆ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!