ಎನ್ಆರ್ ಸಿ ಕೈಬಿಡಲ್ಲ: ಗೃಹ ಸಚಿವ

350

ಬೆಂಗಳೂರು: ಎನ್ಆರ್ ಸಿ ಕೈಬಿಡುವ ಪ್ರಶ್ನಯೇ ಇಲ್ಲವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎನ್ಆರ್ ಸಿ ನೀತಿಯನ್ನ ಕೇಂದ್ರ ಸರ್ಕಾರ ರೂಪಿಸ್ತಿದೆ. ವಿಧಾನಸೌಧದಲ್ಲಿ ಮಾತ್ನಾಡಿದ ಅವರು, ಈ ಬಗ್ಗೆ ರಾಜ್ಯದಲ್ಲಿ ಮಾಹಿತಿ ಸಂಗ್ರಹಿಸಲಾಗ್ತಿದೆ. ಅದನ್ನ ಕೇಂದ್ರ ಗೃಹ ಇಲಾಖೆಗೆ ಕಳಸಿಕೊಡಲಾಗುತ್ತೆ ಅಂತಾ ಹೇಳಿದ್ರು.

ನೆಲಮಂಗಲ ಹತ್ತಿರ ತಯಾರಾಗ್ತಿರುವ ಡಿಟೆಕ್ಷನ್ ಸೆಂಟರ್ ಗೂ ಎನ್ಆರ್ ಸಿ’ಗೂ ಯಾವುದೇ ಸಂಬಂಧವಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ಸೆರೆ ಕೇಂದ್ರ ನಿರ್ಮಾಣವಾಗ್ತಿದೆ. ಅದು ಶೀಘ್ರದಲ್ಲಿ ಕಾರ್ಯ ನಿರ್ವಹಿಸುತ್ತೆ ಅಂತಾ ಹೇಳಿದ್ರು. ವೀಸಾ, ಪಾಸ್ ಪೋರ್ಟ್ ಮುಗಿದ್ರೂ ಯಾರು ಇಲ್ಲೇ ಇರುತ್ತಾರೋ ಅಂತವರನ್ನ ಡಿಟೆಕ್ಷನ್ ಸೆಂಟರ್ ಗೆ ಕರೆದುಕೊಂಡು ಹೋಗಲಾಗುತ್ತೆ. ಅಲ್ಲಿಂದ ದೆಹಲಿಯ ಸಂಬಂಧಪಟ್ಟ ಆಯಾ ದೇಶಗಳ ರಾಯಭಾರಿ ಕಚೇರಿ ಮೂಲಕ ಅವರನ್ನ ಕಳಿಸಿಕೊಡುವ ಕೆಲಸವಾಗುತ್ತೆ ಎಂದಿದ್ದಾರೆ.

ಇನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ಮಾತ್ನಾಡಿದ ಅವರು, ರಾಜ್ಯ ಪೊಲೀಸ್ರು ಆಂಧ್ರ ಹಾಗೂ ಮಹಾರಾಷ್ಟ್ರ ಪೊಲೀಸರೊಂದಿಗೆ ಸೇರಿಕೊಂಡು ಎಲ್ಲ ರೀತಿಯ ತನಿಖೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಯಾರನ್ನೂ ಬಂಧಿಸಲ್ಲ ಎಂದು ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!