ಮೋದಿ-ಬ್ಯಾನರ್ಜಿ ಭೇಟಿ.. ಮಾಧ್ಯಮಗಳ ಬಗ್ಗೆ ಪಿಎಂ ಹೇಳಿದ್ದೇನು?

376

ನವದೆಹಲಿ: ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಭಾರತ ಮೂಲದ ಅಮೆರಿಕ ನಿವಾಸಿ ಅಭಿಜಿತ ಬ್ಯಾನರ್ಜಿ ಹಾಗೂ ಪ್ರಧಾನಿ ಮೋದಿ ಮುಖಾಮುಖಿಯಾಗಿದ್ದಾರೆ. ಮೋದಿ ವಿರೋಧಿ ಹೇಳಿಕೆ ನೀಡುವಂತೆ ಮಾಧ್ಯಮದವರು ನಿಮ್ಗೆ ಬಲೆ ಬೀಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಅವರು ಟಿವಿ ನೋಡ್ತಿದ್ದಾರೆ. ನಿಮ್ಮನ್ನ ಅವರು ಗಮನಿಸ್ತಿದ್ದಾರೆ. ನೀವೇನು ಮಾಡಲು ಯತ್ನಿಸ್ತಿದ್ದೀರಿ ಅವರಿಗೆ ಗೊತ್ತು. ಆದ್ರಿಂದ ನಿಲ್ಲಿಸಿ ಎಂದು ಮಾಧ್ಯಮದವರಿಗೆ ನಗುತ್ತಾ ಹೇಳಿದ್ರು. ಪ್ರಧಾನಿ ಜೊತೆಗಿನ ಭೇಟಿ ವಿಶಿಷ್ಟ ಅನುಭವ ನೀಡಿತು. ಸಾಕಷ್ಟು ಸಮಯ ನೀಡಿದ್ದಕ್ಕೆ ಪ್ರಧಾನಿಗೆ ಧನ್ಯವಾದಗಳು ಅಂತಾ ಹೇಳಿದ್ದಾರೆ.

ಭಾರತದ ಬಗ್ಗೆ ಪಿಎಂ ತಮ್ಮ ಅನಿಸಿಕೆಯನ್ನ ಬಹಳಷ್ಟು ಹೇಳಿದ್ರು. ಅದು ಸಾಕಷ್ಟು ವಿಶಿಷ್ಟವಾಗಿತ್ತು. ಸರ್ಕಾರ ಆಡಳಿತಶಾಹಿಯಲ್ಲಿ ಸುಧಾರಣೆ ತರಲು ಹೇಗೆ ಯತ್ನಿಸ್ತಿದೆ. ಜನರ ಅಭಿಪ್ರಾಯಗಳನ್ನು ಹೇಗೆ ಪರಿಗಣಿಸಲಾಗ್ತಿದೆ ಎಂದು ಪ್ರಧಾನಿ ಹೇಳಿದ್ರು ಅಂತಾ ತಿಳಿಸಿದ್ರು. ಈ ಬಗ್ಗೆ ಪಿಎಂ ಮೋದಿ ಸಹ ತಮ್ಮ ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!