ಓಡಿಶಾ ರೈಲು ದುರಂತದಲ್ಲಿ 280 ಜನರ ಸಾವು: ಸಹಾಯವಾಣಿ ಶುರು

163

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಡೀ ದೇಶವೇ ಬೆಚ್ಚಿಬೀಳಿಸುವಂತಹ ಘಟನೆ ಶುಕ್ರವಾರ ನಡೆದಿದ್ದು, ಓಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 280ಕ್ಕೂ ಅಧಿಕವಾಗಿದೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ಇದರಿಂದಾಗಿ ಎಲ್ಲೆಡೆ ಆತಂಕ ಮೂಡಿದೆ. ದೇಶದ ತುಂಬಾ ಸಹಾಯವಾಣಿ ತೆರೆಯಲಾಗಿದೆ.

ಬೆಂಗಳೂರು ಮೂಲದ ಇಬ್ಬರು ಮೃತಪಟ್ಟ ವರದಿಯಾಗಿದೆ. ಡಿಕ್ಕಿಯಾದ ಹೌರಾ ರೈಲಿನಲ್ಲಿ ಚಿಕ್ಕಮಗಳೂರಿನ 110 ಜನರು ಇದ್ದರಂತೆ. ಇವರೆಲ್ಲ ಜಾರ್ಖಾಂಡ್ ಪ್ರವಾಸ ಕೈಗೊಂಡಿದ್ದರು. ಅದೃಷ್ಟವಶಾತ್ ಜೀವಹಾನಿ ಆಗಿಲ್ಲ. ಅಪಘಾತದ ಹಿನ್ನೆಲೆ ಬೆಂಗಳೂರಿನಿಂದ ಹೊರಡಬೇಕಿದ್ದ ಮೂರು ರೈಲುಗಳನ್ನು ರದ್ದುಗೊಳಿಸಲಾಗಿದೆ.

ಅಪಘಾತಕ್ಕಿಡಾದ ರೈಲು ಬೈಯಪ್ಪನಹಳ್ಳಿಯಿಂದ ಹೌರಾಗೆ ಹೊರಟಿತ್ತು. ಇದು 46 ಗಂಟೆಗಳ ಪ್ರಯಾಣ. ರಾತ್ರಿ ಅಪಘಾತಗೊಂಡಿದ್ದು, ಮೂರು ಬೋಗಿಗಳು ಸಂಪೂರ್ಣ ಹಾನಿಯಾಗಿವೆ. ಸಾಮಾನ್ಯ ಹಾಗೂ ರಿಸರ್ವೇಶನ್ ಬೋಗಿಗಳಿಗೆ ಹೆಚ್ಚು ಹಾನಿಯಾಗಿದೆ. ಇದುವರೆಗೂ ಕರ್ನಾಟಕದ ಪ್ರಯಾಣಿಕರ ಸಾವು, ನೋವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಬೆಂಗಳೂರು- 080-22356409, ಬಂಗಾರಪೇಟೆ- 08153 255253, ಕುಪ್ಪಂ-8431403419, ಸರ್​ ಎಂ ವಿಶ್ವೇಶ್ವರಯ್ಯ ಬೆಂಗಳೂರು- 09606005129, ಕೆಜೆಎಂ ಬೆಂಗಳೂರು- 88612 03980 ಇಲ್ಲಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.




Leave a Reply

Your email address will not be published. Required fields are marked *

error: Content is protected !!