ಬಿಹಾರದಲ್ಲಿ ಹಳಿ ತಪ್ಪಿದ ರೈಲು: ನಾಲ್ವರ ಸಾವು

177

ಪ್ರಜಾಸ್ತ್ರ ಸುದ್ದಿ

ಪಾಟ್ನಾ: ಬಕ್ಸರ್ ಜಿಲ್ಲೆಯಲ್ಲಿ ಕಾಮಾಖ್ಯ-ಈಶಾನ್ಯ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ 4 ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಘುನಾಥಪುರ ರೈಲು ನಿಲ್ದಾಣದ ಬಳಿಕ ಬುಧವಾರ ತಡರಾತ್ರಿ ದುರ್ಘಟನೆ ನಡೆದಿದೆ.

23 ಬೋಗಿಗಳು ಹೊಂದಿರುವ ರೈಲಿನ 6 ಬೋಗಿಗಳು ಹಳಿ ತಪ್ಪಿವೆ. ಎರಡು ಎಸಿ 4 ಶ್ರೇಣಿಯ ಬೋಗಿಗಳು, 4 ಇತರೆ ಬೋಗಿಗಳು ಹಳಿ ತಪ್ಪಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಕ್ಸರ್ ಎಸ್ಪಿ ಮನೀಶ್ ಕುಮಾರ್ ಹೇಳಿದ್ದಾರೆ.

ರೈಲ್ವೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಮುಕ್ಕಾಂ ಹೂಡಿದ್ದು ಪರಿಶೀಲನೆ ಕಾರ್ಯ ನಡೆದಿದೆ. ಈ ಘಟನೆಯಿಂದಾಗಿ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!