ಬ್ರೇಕಿಂಗ್ ನ್ಯೂಸ್: ಕೋವಿಡ್ 19ಗೆ ಸಿಂದಗಿಯಲ್ಲಿ 2ನೇ ಸಾವು

527

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ನಗರದಲ್ಲಿನ ನಿಗದಿತ ಕೋವಿಡ್ 19 ಸೆಂಟರ್ ನಲ್ಲಿ ಸಿಂದಗಿ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ತಾಲೂಕಿನಲ್ಲಿ 2 ಸಾವು ದಾಖಲಾಗಿದೆ. ಕೋವಿಡ್ 19 ತುಗುಲಿರುವುದು ಗುರುವಾರ ದೃಢಪಟ್ಟಿತ್ತು. ಇಂದು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದ ಕಲ್ಯಾಣನಗರದ ನಿವಾಸಿ 55 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಕಳೆದ ಕೆಲ ದಿನಗಳ ಹಿಂದೆ ವಿಜಯಪುರದ ಆಸ್ಪತ್ರೆಗೆ ದಾಖಲಾಗಿದ್ರು. ಜುಲೈ 20ರಂದು ಅವರ ಗಂಟಲದ್ರವ ಪರೀಕ್ಷೆ ನಡೆಸಲಾಗಿತ್ತು ಎಂದು ಹೇಳಲಾಗ್ತಿದೆ. ಇಂದು ಸಂಜೆ ಬರುವ ಹೆಲ್ತ್ ಬುಲೆಟಿನ್ ನಲ್ಲಿ ಈ ಸಾವು ಪ್ರಕರಣ ದಾಖಲಾಗಲಿದೆ ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!