ಮಂಡ್ಯದಲ್ಲಿ ನಾನೇ ಬಿಜೆಪಿ ಅಭ್ಯರ್ಥಿ: ಸಂಸದೆ ಸುಮಲತಾ

154

ಪ್ರಜಾಸ್ತ್ರ ಸುದ್ದಿ

ಕೆ.ಆರ್ ಪೇಟೆ: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಆರಂಭದಿಂದಲೇ ಅಸಮಾಧಾನ ವ್ಯಕ್ತವಾಗುತ್ತಿದೆ. ತೆನೆ ಇಳಿಸಿ ಹೋಗುವ ನಾಯಕರು ಒಂದು ಕಡೆ, ಕಮಲ ಪಡೆಯಿಂದ ದೂರವಾಗುತ್ತಿರುವ ಗುಂಪು ಇನ್ನೊಂದು ಕಡೆ. ಇದು ಲೋಕಸಭಾ ಚುನಾವಣೆಯಲ್ಲಿ ಯಾವ ಪರಿಣಾಮ ಬೀರುತ್ತೆ ಅನ್ನೋದು ಮುಂದೆ ತಿಳಿಯಲಿದೆ. ಈ ಕುರಿತು ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಂಡರೂ ಮಂಡ್ಯದಲ್ಲಿ ನಾನೇ ಬಿಜೆಪಿ ಅಭ್ಯರ್ಥಿ ಎಂದಿದ್ದಾರೆ.

ಈ ಮೈತ್ರಿಯಿಂದ ನಾಲ್ಕೈದು ಸ್ಥಾನಗಳಲ್ಲಿ ಜೆಡಿಎಸ್ ಗೆ ಬಿಜೆಪಿ ಬೆಂಬಲಿಸಬೇಕು ಎನ್ನುವುದಾಗಿದೆ. ಇದರಲ್ಲಿ ಮಂಡ್ಯ, ಹಾಸನ, ತುಮಕೂರು ಪ್ರಮುಖವಾಗಿವೆ. 2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸುಮಲತಾ ಅಂಬರೀಶಗೆ ಕಾಂಗ್ರೆಸ್, ಬಿಜೆಪಿ ಬೆಂಬಲ ಸಿಕ್ಕಿತ್ತು. ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದರು. ಇಷ್ಟು ದಿನ ಯಾವ ಪಕ್ಷದೊಂದಿಗೂ ಹೋಗಲಾರೆ ಎಂದಿದ್ದ ಸಂಸದೆ ಸುಮಲತಾ ಇದೀಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿ ಎನ್ನುತ್ತಿದ್ದು, ಬಿಜೆಪಿ, ಜೆಡಿಎಸ್ ನಲ್ಲಿ ಆತಂರಿಕ ಅಸಮಾಧಾನಕ್ಕೆ ಕಾರಣವಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!