ಹೆಣ್ಮಕ್ಕಳಿಗೆ ಉಚಿತ ಬಸ್ ಪ್ರಯಾಣ, ಪುರುಷರಿಗೆ ಮೀಸಲು

175

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಚುನಾವಣೆಪೂರ್ವ ಕಾಂಗ್ರೆಸ್ ನೀಡಿದ್ದ 5 ಗ್ಯಾರೆಂಟಿಗಳನ್ನು ಅನುಷ್ಠಾನಕ್ಕೆ ದಿನಾಂಕ ನಿಗದಿಯಾಗಿದೆ. ಜೂನ್ 11ರಿಂದ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸಿಗಲಿದೆ. ಈ ಮೂಲಕ ಇನ್ನು ಮುಂದೆ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ, ಇಡೀ ಬಸ್ ತುಂಬಾ ಮಹಿಳೆಯರಿಗೆ ಅವಕಾಶವಿಲ್ಲ.

ಒಂದು ಬಸ್ಸಿನಲ್ಲಿ ಶೇಕಡ 50ರಷ್ಟು ಸೀಟು ಪುರುಷರಿಗೆ ಮೀಸಲು ಎಂದು ಘೋಷಿಸಲಾಗಿದೆ. ಈ ರೀತಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಯಾಕಂದರೆ ಟಿಕೆಟ್ ಪಡೆದು ಪ್ರಯಾಣಿಸುವ ಗಂಡಸರಿಗೆ ಸಮಸ್ಯೆಯಾಗದಿರಲಿ ಎಂದು ಈ ರೀತಿ ಮಾಡಿದ್ದು, ಇನ್ನು ಮುಂದೆ ಮಹಿಳೆಯರಿಗೆ ಮಾತ್ರ ಎನ್ನುವ ಬೋರ್ಡ್ ಜಾಗದಲ್ಲಿ ಪುರುಷರಿಗೆ ಮಾತ್ರ ಎನ್ನುವುದು ಬರಲಿದೆ.

ನಗರಗಳಲ್ಲಿ ಆಟೋ, ಕ್ಯಾಬ್, ಮೆಟ್ರೋ ಸಂಚಾರ ಮಾಡುತ್ತಿದ್ದ ಮಹಿಳೆಯರು ಇನ್ನು ಮುಂದೆ ಬಸ್ಸಿಗೆ ಬರಲು ಶುರು ಮಾಡಲಿದ್ದಾರೆ. ಹೀಗಾಗಿ ಸರ್ಕಾರದ ಆರ್ಥಿಕ ಮೂಲ ಆಗಿರುವ ಪುರುಷರು ನಿಂತುಕೊಂಡು ಹೋಗುವುದನ್ನು ತಪ್ಪಿಸಲು ಶೇ.50ರಷ್ಟು ಸೀಟಿ ಮೀಸಲು ಎಂದು ಘೋಷಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!