ಆನ್ಲೈನ್ ಶಿಕ್ಷಣ: ಸರ್ಕಾರ, ಶಿಕ್ಷಕರು, ಪೋಷಕರು ಸಿದ್ಧರಾಗಿದ್ದಾರೆಯೇ?

306

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಆನ್ ಲೈನ್ ಶಿಕ್ಷಣವನ್ನ ಪ್ರಾಥಮಿಕ ಹಂತದಿಂದ ಶುರು ಮಾಡಲು ಶಿಕ್ಷಣ ತಜ್ಞರ ಸಮಿತಿ ಶಿಪಾರಸು ಮಾಡಿದೆ. ಈ ಸಂಬಂಧ ಹೈಕೋರ್ಟ್ ಸಹ ಅಸ್ತು ಅಂದಿದೆ. ಇದಕ್ಕೆ ಪರ-ವಿರೋಧಗಳು ವ್ಯಕ್ತವಾಗ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಣ ಮಾಡಿಕೊಳ್ಳಲು ಇದೊಂದು ದೊಡ್ಡ ಅವಕಾಶವೆಂದು ವಿರೋಧಿಸುವವರ ಮಾತಾಗಿದೆ.

ಶೈಕ್ಷಣಿಕ ಚಟುವಟಿಕೆಯಿಂದ ದೂರ ಉಳಿಯುತ್ತಿರುವ ಮಕ್ಕಳಿಗೆ, ಕರೋನಾ ಟೈಂನಲ್ಲಿ ಆನ್ಲೈನ್ ಶಿಕ್ಷಣ ಒಳ್ಳೆಯದು. ಇದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಯವರು ಹೇಳ್ತಿದ್ದಾರೆ. ಇದರ ಜೊತೆಗೆ ಹಲವು ಪ್ರಶ್ನೆಗಳು ಜನರ ತೆಲೆಯಲ್ಲಿ ಓಡಾಡ್ತಿದ್ದು, ಈ ಬಗ್ಗೆ ಸರ್ಕಾರ ಏನು ಮಾಡಿದೆ ಅನ್ನೋದು ತಿಳಿಸಬೇಕಿದೆ.

ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಹೈಸ್ಕೂಲ್ ವಿದ್ಯಾರ್ಥಿಗಳವರೆಗೂ ಆನ್ಲೈನ್ ಶಿಕ್ಷಣ ನೀಡಬೇಕು ಅಂತಿದ್ದಾರೆ. ಪ್ರಾಥಮಿಕ ಮಕ್ಕಳಿಗೆ ಈ ಶಿಕ್ಷಣ ಸೂಕ್ತವೇ? ತಂತ್ರಜ್ಞಾನದ ಮೂಲಕ ಮಕ್ಕಳಲ್ಲಿ ಕಲಿಯುವ ಸಾಮರ್ಥ್ಯ ಇದ್ಯಾ? ಮನೆಯಲ್ಲಿ ಕುಳಿತು ಕ್ಲಾಸ್ ಕಲಿಯಲು ಬೇಕಾಗಿರುವ ಟೆಕ್ನಾಲಜಿ ಸಾಮಗ್ರಿಗಳು ಎಲ್ಲ ಪೋಷಕರ ಬಳಿ ಇವೆಯಾ? ಸ್ವತಃ ಮಕ್ಕಳೇ ಇದನ್ನ ನಿಯಂತ್ರಣ ಮಾಡ್ತಾರಾ? ಇವರ ಜೊತೆ ಸಹಾಯಕರು ಬೇಡವೇ? ಆನ್ಲೈನ್ ಮೂಲಕ ಮಕ್ಕಳನ್ನ ಕಂಟ್ರೋಲ್ ಮಾಡೋದು ಹೇಗೆ? ಅವರ ಓದು ಬರಹ ತಿಳಿದುಕೊಳ್ಳುವುದು ಹೇಗೆ ಅನ್ನೋದು ಸೇರಿದಂತೆ ಹಲವು ಪ್ರಶ್ನೆಗಳಿವೆ.

ಖಾಸಗಿ ಶಾಲೆಯ ಶಿಕ್ಷಕರಿಗೆ ಬಹುತೇಕ ಟೆಕ್ನಾಲಜಿ ಬಗ್ಗೆ ಗೊತ್ತಿರುತ್ತೆ. ಅಲ್ಲಿ ಸಾಧನ ಸಲಕರಣಿಗಳು ಇರುತ್ತವೆ. ಆದ್ರೆ, ಸರ್ಕಾರಿ ಶಾಲೆಯಲ್ಲಿನ ಶಿಕ್ಷಕರ ಕಥೆ ಏನು? ಆನ್ಲೈನ್ ಶಿಕ್ಷಣಕ್ಕೆ ಅವರು ಸಿದ್ಧರಾಗಿದ್ದಾರಾ? ಆನ್ಲೈನ್ ಕ್ಲಾಸ್ ಗೆ ಬೇಕಾಗಿರುವ ಸಾಧನಗಳನ್ನ ಸರ್ಕಾರ ನೀಡುತ್ತಾ? ಬಡ, ಮಧ್ಯಮ ವರ್ಗದ ಪೋಷಕರು ಇದಕ್ಕೆ ಸಿದ್ಧವಾಗಿದ್ದಾರಾ? ಆನ್ಲೈನ್ ಕ್ಲಾಸ್ ಗೆ ಬೇಕಾದ ವಾತಾವಾರಣ, ಆರ್ಥಿಕ ಶಕ್ತಿ ಅವರ ಬಳಿ ಇದ್ಯಾ? ಆ ಟೆಕ್ನಾಲಜಿ ಬಗ್ಗೆ ಪೋಷಕರಿಗೆ ಎಷ್ಟು ಗೊತ್ತು? ದಿನಗೂಲಿ, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡುವ ಕುಟುಂಬಗಳಿಂದ ಆನ್ಲೈನ್ ಶಿಕ್ಷಣ ಕೊಡಿಸಲು ಸಾಧ್ಯವೇ?

ಇದು ಮತ್ತೊಂದು ಮೂಲದ ಪ್ರಶ್ನೆಗಳು. ಇಲ್ಲಿ ಬರೀ ಪ್ರಶ್ನೆಗಳಿವೆ. ಉತ್ತರಗಳಲ್ಲ. ಉತ್ತರ ನೀಡಬೇಕಾದವರು ಎಷ್ಟು ಪ್ರಮಾಣದಲ್ಲಿ ಇದಕ್ಕೆ ಸಿದ್ಧರಾಗಿದ್ದಾರೆ. ಆನ್ಲೈನ್ ಶಿಕ್ಷಣಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನೂ ಸರ್ಕಾರಿ ಶಾಲೆ ಮಕ್ಕಳಿಗೂ ಕೊಡಲು ಏನು ಕ್ರಮ ತೆಗೆದುಕೊಳ್ಳಲಾಗ್ತಿದೆ ಅನ್ನೋ ಪ್ರಶ್ನೆಗಳೇ ಮತ್ತೆ ಹುಟ್ಟಿಕೊಳ್ಳುತ್ತವೆ. ಹೀಗಾಗಿ ಇದಕ್ಕೆ ಸರ್ಕಾರ, ಶಿಕ್ಷಕರು, ಪೋಷಕರು ಎಷ್ಟರ ಮಟ್ಟಿಗೆ ಸಿದ್ಧವಾಗಿದ್ದಾರೆ ಅನ್ನೋದು ಮುಖ್ಯವಾಗಿದೆ.




Leave a Reply

Your email address will not be published. Required fields are marked *

error: Content is protected !!