ಸಿಂದಗಿ ಜನತೆಯನ್ನ ಸೆಳೆಯುತ್ತಿದೆ ‘ಹೂ’ಲೋಕ

447

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮಳೆಗಾಲ ಶುರುವಾಗ್ತಿದ್ದಂತೆ ಒಂದಿಷ್ಟು ವ್ಯಾಪಾರ ವಹಿವಾಟುಗಳಿಗೆ ಕಳೆ ಬರುತ್ತೆ. ಛತ್ರಿ, ಜಾಕೇಟ್, ರೈನ್ ಕೋಟ್ ಸೇರಿದಂತೆ ಋತುಮಾನದ ವ್ಯಾಪಾರದ ಚಟುವಟಿಕೆ ಜೋರಾಗುತ್ತೆ. ಅದೇ ರೀತಿ ಹೂವಿನ ಸಸಿಗಳ ಮಾರಾಟವೂ ಶುರುವಾಗುತ್ತೆ. ಹೀಗಾಗಿ ಜನರು ಹೂವಿನ ಸಸಿಗಳನ್ನ ಹುಡುಕಿಕೊಂಡು ಹೋಗ್ತಾರೆ.

ಇದೀಗ ಪಟ್ಟಣದ ವಿಜಯಪುರ ರಸ್ತೆಯ ಹತ್ತಿರದ ಎಪಿಎಂಸಿ ಗೇಟ್ ಬಳಿ ಹೂವಿನ ಲೋಕ ತೆರೆದುಕೊಂಡಿದೆ. ರಸ್ತೆ ಬದಿಗೆ ಇರುವ ಈ ಹೂವಿನ ಅಂಗಳದಲ್ಲಿ ನಾನಾ ವಿಧದ ಹೂವಿನ ಸಸಿಗಳು, ಅಲಂಕಾರಿಕ ಗಿಡಗಳು ಜನರನ್ನ ಕೈಬೀಸಿ ಕರೆಯುತ್ತಿವೆ. ಅರಳಿನಿಂತ ಹೂವುಗಳು ಚೆಲುವೆಲ್ಲ ನಂದೆಂದು, ನೋಡುಗರನ್ನ ತಮ್ಮತ್ತ ಸೆಳೆಯುತ್ತಿವೆ.

ಹೂವಿನ ಸಸಿಗಳನ್ನ ಮಾರಾಟ ಮಾಡ್ತಿರುವ ಸುಧೀರ ಹೇಳುವ ಪ್ರಕಾರ, ಬೆಂಗಳೂರು, ಪೂನಾ, ಆಂಧ್ರದಿಂದ ಸಸಿಗಳನ್ನ ತೆಗೆದುಕೊಂಡು ಬರಲಾಗ್ತಿದೆಯಂತೆ. ಇಲ್ಲಿ ಗುಲಾಬಿ, ದಾಸವಾಳ, ಮಲ್ಲಿಗೆ, ಸೇವಂತಿಗೆ, ಮಾವು, ಪೇರು, ಬಾದಾಮ, ಚಿಕ್ಕು, ತೆಂಗು, ಉದ್ಯಾನ ಅಲಂಕಾರಿಕ ಸಸಿಗಳು ಸೇರಿದಂತೆ ತರಹೇವಾರಿ ಗಿಡಗಳು ಇಲ್ಲಿವೆ.

30 ರೂಪಾಯಿಯಿಂದ 300 ರೂಪಾಯಿವರೆಗಿನ ಸಸಿ, ಗಿಡಗಳು ಇಲ್ಲಿದ್ದು, ಸಾರ್ವಜನಿಕರು ಸಸಿಗಳನ್ನ ಕೊಳ್ಳಲು ಬರ್ತಿದ್ದಾರೆ. ಮಳೆಗಾಲ ಆರಂಭವಾಗಿರುವುದ್ರಿಂದ ಮನೆ ಮುಂದೆ, ಟೆರೆಸ್ ಮೇಲೆ ಹೂವಿನ ಸಸಿಗಳನ್ನ ನೆಟ್ಟು ಬೆಳೆಸಲು ಮುಂದಾಗಿದ್ದಾರೆ. ಹೀಗಾಗಿ ಒಂದಿಷ್ಟು ವ್ಯಾಪಾರವು ಚೆನ್ನಾಗಿ ನಡೆದಿದೆ.




Leave a Reply

Your email address will not be published. Required fields are marked *

error: Content is protected !!