ಗುಮ್ಮಟನಗರಿಯಲ್ಲಿ ‘ಮಹಾ’ನಾಡಿನ ‘ಕೆಂಪು’ ಸುಂದರಿಯರ ದಂಧೆ

657

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕರೋನಾ ಎಲ್ಲರನ್ನ ಕಾಡ್ತಿದೆ. ಇದರ ಎಫೆಕ್ಟ್ ಎಲ್ಲದರ ಮೇಲೂ ಆಗಿದೆ. ಅದು ರೆಡ್ ಲೈಟ್ ಏರಿಯಾವನ್ನ ಬಿಟ್ಟಿಲ್ಲ. ಕರೋನಾ ಸೋಂಕಿನಿಂದ ವೇಶ್ಯಾವಾಟಿಕೆ ದಂಧೆ ಸಹ ಬದಲಾಗಿದೆ. ಹೀಗಾಗಿ ನೆರೆಯ ಮಹಾರಾಷ್ಟ್ರದಿಂದ ನಗರಕ್ಕೆ ಹುಡ್ಗಿಯರನ್ನ ಕರೆಸಿಕೊಂಡು, ಮನೆಯಲ್ಲಿಯೇ ಮಾಂಸದಂಧೆ ಶುರು ಮಾಡಿದ್ದಾಳೆ ಇಲ್ಲೊಬ್ಬಳು ಆಂಟಿ.

ನಗರದ ಗಾಂಧಿನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಲಾಗ್ತಿದೆ. ಇದನ್ನ ಸುತ್ತಲಿನ ಮನೆಯವರು ವಿರೋಧ ವ್ಯಕ್ತಪಡಿಸಿದ್ರೂ ಕೇಳ್ತಿಲ್ಲ. ಸುತ್ತಮುತ್ತ ಮನೆಗಳಿದ್ದೂ, ಬಡವಾಣೆಯಲ್ಲಿ ಇದೆಲ್ಲ ಸರಿಯಲ್ಲವೆಂದು ಹೇಳಿದ್ರೂ ದಂಧೆ ನಡೆಸುವ ಆಂಟಿ ಅವರ ಮಾತು ಕೇಳುವುದಿಲ್ಲ. ಬೇರೆ ಯಾರನ್ನಾದ್ರೂ ಕರೆದುಕೊಂಡು ಬಾ ಎಂದು ಹೇಳುತ್ತಾಳೆ. ಇದನ್ನ ಸ್ಥಳೀಯ ಹುಡ್ಗರು ವಿಡಿಯೋ ಮಾಡಿದ್ದಾರೆ.

ಮುಂಬೈ, ಪುಣೆಯಿಂದ ಯುವತಿಯರನ್ನ ಕರೆಯಿಸಿ ವೇಶ್ಯಾವಾಟಿಕೆ ನಡೆಸಲಾಗ್ತಿದೆ. ಸ್ಥಳೀಯರು ಬರುವುದನ್ನ ನೋಡಿದ ಯುವಕರು ಮನೆಯ ಹಿಂದೆ ಹೋಗಿ ಬಚ್ಚಿಟ್ಟುಕೊಳ್ತಾರೆ. ದಂಧೆ ನಡೆಸ್ತಿರುವ ಆಂಟಿಯಿಂದ ಸುತ್ತಮುತ್ತಲಿನ ಮನೆಯವರಿಗೆ ಕಿರಿಕಿರಿಯಾಗಿದ್ದು, ಇತರೆ ಹೆಣ್ಮಕ್ಕಳಿಗೆ ತೊಂದರೆಯಾಗ್ತಿದೆ. ಹೀಗಾಗಿ ಪೊಲೀಸ್ರು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!