ಬೇಸಿಗೆಯಲ್ಲೂ ಕೂಲ್ ಆಗಿರಿ..!

671

ಬೆಂಗಳೂರು : ಬೇಸಿಗೆ ಬಂದರೆ ಸಾಕು, ಸೂರ್ಯನ ಕಡುತಾಪಕ್ಕೆ ಪ್ರತಿಯೊಬ್ಬರು ಬಳಲಿ ಬೆಂಡಾಗುತ್ತಾರೆ. ಇದರಿಂದಾಗಿ ಆರೋಗ್ಯದಲ್ಲಿ ಒಂದಿಷ್ಟು ಏರುಪೇರಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಆಹಾರ ಸೇವನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ, ನಿಮ್ಮ ಹೆಲ್ತ್ ಚೆನ್ನಾಗಿಟ್ಟುಕೊಳ್ಳಬಹುದು. ಕೊಬ್ಬು ರಹಿತ ಮತ್ತು ಪೌಷ್ಠಿಕ ಆಹಾರಕ್ಕೆ ಹೆಚ್ಚು ಒತ್ತು ನೀಡಬೇಕು.

ಆಹಾರ ಸೇವನೆ ನಂತರ ಶೇ 20ರಷ್ಟು ನೀರು ಕುಡಿಯಬೇಕು. ಪುರುಷರು ನಿತ್ಯ 3.7 ಲೀಟರ್ ಮತ್ತು ಮಹಿಳೆಯರು 2.7 ಲೀಟರ್ ಕುಡಿಯಬೇಕು ಅಂತಾ ಅಮೆರಿಕಾದ ವೈದ್ಯಕೀಯ ರಾಷ್ಟ್ರೀಯ ಅಕಾಡೆಮಿ ಹೇಳಿದೆ. ಇನ್ನು ಬೇಸಿಗೆ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತೆ. ಹೀಗಾಗಿ ಆಗಾಗ ನೀರು ಕುಡಿಯಬೇಕಾಗುತ್ತೆ. ಅಲ್ದೇ, ಆಗಾಗ ಮೂತ್ರ ವಿಸರ್ಜನೆ ಮಾಡುವುದರಿಂದ ಹೆಪಟಿಟೈಸ್ ಸೇರಿದಂತೆ ಮತ್ತಿತರ ರೋಗಗಳು ಬರದಂತೆ ತಡೆಯಬಹುದು.

ಸಮ್ಮರ್ ಟೈಂನಲ್ಲಿ ಊಟದ ಪ್ರಮಾಣ ಕಡಿಮೆ ಇರಬೇಕು. ಲಘು ಆಹಾರ ಸೇವನೆ ಇನ್ನೂ ಒಳ್ಳೆಯದು. ಇದರಲ್ಲಿ ಕ್ಯಾಲೋರಿಯ ಪ್ರಮಾಣ ಹೆಚ್ಚಿಗೆ ಇದಷ್ಟು ಉತ್ತಮ. ಮೊಸರು, ತಾಜಾ ಹಣ್ಣಿನ ಜ್ಯೂಸ್ ಗಳು, ಸಪ್ಪು, ತರಕಾರಿ ಹೆಚ್ಚು ಸೇವಿಸಿದಷ್ಟು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರ ಜೊತೆಗೆ ನಿಂಬೆ ಜ್ಯೂಸ್, ಎಳೆನೀರು, ಮಜ್ಜಿಗೆ ಕುಡಿಯುವುದ್ರಿಂದ ದೇಹಕ್ಕೆ ಅಗತ್ಯ ಪ್ರಮಾಣದ ನೀರಿನ ಅಂಶ ದೊರಕುತ್ತೆ.

ಪ್ರತಿಯೊಂದು ಕ್ಷೇತ್ರದ ತಾಜಾ ಸುದ್ದಿಯನ್ನು ಪಡೆಯಲು ಪ್ರಜಾಸ್ತ್ರ ವೆಬ್ ಪೋರ್ಟಲ್ ಫಾಲೋ ಮಾಡಿ ಮತ್ತು ಫೇಸ್ ಬುಕ್ ಪೇಜ್ ಲೈಕ್ ಮಾಡಿ.


TAG


Leave a Reply

Your email address will not be published. Required fields are marked *

error: Content is protected !!