ಸಮ್ಮರ್ ಡ್ರೆಸ್ ಕೋಡ್

784

ಬೇಸಿಗೆ ಶುರುವಾದರೆ ಸಾಕು, ಜನರು ಹೈರಾಣಾಗಿ ಹೋಗುತ್ತಾರೆ. ಅದರಲ್ಲೂ ಹೈದ್ರಾಬಾದ್ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಮ್ಮರ್ ಕಳೆಯೋದು ಅಂದ್ರೆ, ಸೂರ್ಯನ ಜೊತೆ ಯುದ್ಧ ಮಾಡಿದಂತೆ. ಹಾಗಾದ್ರೆ, ಬೇಸಿಗೆಯಲ್ಲಿ ನಿಮ್ಮ ಡ್ರೆಸ್ ಹೇಗಿದ್ರೆ ನೀವು ಕೂಲ್ ಕೂಲ್ ಆಗಿರಲು ಸಾಧ್ಯ ಗೊತ್ತಾ? ಅದಕ್ಕೆ ಉತ್ತರ ಇಲ್ಲಿದೆ.

ಇವತ್ತಿನ ಫ್ಯಾಶನ್ ಜಗತ್ತಿನಲ್ಲಿ ಸಖತ್ ಟ್ರೆಂಡಿಯಾಗಿರುವ ಡ್ರೆಸ್ ಗಳು ನಿಮಗೆ ಸಿಗುತ್ತವೆ. ಕಾಲಕ್ಕೆ ತಕ್ಕಂತೆ ಬಟ್ಟೆಗಳನ್ನ ಹಾಕಿಕೊಳ್ಳಬಹುದು. ಅದೇ ರೀತಿ ಬೇಸಿಗೆಯಲ್ಲಿ ಹಾಯಾಗಿ ಕಾಲ ಕಳೆಯಲು ನಿಮಗೆ ಇಷ್ಟವಾದ ಸ್ಟೈಲ್ ನಲ್ಲಿ ಬಟ್ಟೆಗಳು ಸಿಗುತ್ತವೆ. ಹುಡುಗಿಯರಿಗಾಗಿ ಕೊಕ್ವಿಟಿಶ್‌, ಡೆನೀಮ್‌, ಕ್ಯಾಶುವಲ್‌, ಲೆಸ್ಡ್‌ ವೆಸ್ಟ್‌ ಸ್ಟ್ರಾಪ್‌, ಫಿಟ್ಟೆಡ್‌, ಪೆಪ್ಲಂ, ಸ್ಪೆಗೆಟಿ, ಶೋಲ್ಡರ್‌ ಸ್ಟ್ರಾಪ್‌, ಥಿಕ್‌, ಸ್ಟ್ರೈಪ್ಡ್‌ ಡ್ರೆಸ್ ಗಳು ಡ್ರೆಂಡ್ ಸೆಟ್ ಮಾಡಿವೆ.

ಇನ್ನು ಹುಡುಗರಿಗೂ ಸಹ ಹೊಸ ಹೊಸ ಶೈಲಿಯ ಡ್ರೆಸ್ ಗಳು ಸೆಳೆಯುತ್ತಿವೆ. ಆಫ್ ಶೋಲ್ಡರ್, ಕೋಲ್ಡ್, ಸ್ಪೆಗಟಿ, ಲೇಸ್, ಪೇಸ್ಟಲ್ ಶೈಲಿ ಡ್ರೆಸ್ ಗಳನ್ನು ತೊಡುವ ಮೂಲಕ ಸ್ಟೈಲ್ ಆಗಿಯೂ ಕಾಣಿಸಿಕೊಳ್ಳಬಹುದು. ಅಲ್ದೇ ಮಹಿಳೆಯರಿಗಾಗಿ ಎಲೈನ್, ಬ್ಯಾಕ್ ಟಾಪ್, ಸಾಲಿಡ್ ಟಾಪ್, ಬಾರ್ಡಟ್, ಎಂಪೈರ್ಡ್ ಟಾಪ್, ಲೆಯರ್ಡ್ ಡ್ರೆಸ್ ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇವುಗಳು ಜೊತೆಗೆ ಹತ್ತಿಯಿಂದ ತಯಾರಾದ ಹಗುರವಾದ ಬಟ್ಟೆಗಳನ್ನು ತೊಡುವುದರಿಂದ ಬೆವರು, ಸೆಕೆ, ತೂರಿಕೆ, ಗುಳ್ಳೆಯಿಂದ ತಪ್ಪಿಸಿಕೊಳ್ಳಬಹುದು.

ಪ್ರತಿಯೊಂದು ಕ್ಷೇತ್ರದ ತಾಜಾ ಸುದ್ದಿಯನ್ನು ಪಡೆಯಲು ಪ್ರಜಾಸ್ತ್ರ ವೆಬ್ ಪೋರ್ಟಲ್ ಫಾಲೋ ಮಾಡಿ ಮತ್ತು ಫೇಸ್ ಬುಕ್ ಪೇಜ್ ಲೈಕ್ ಮಾಡಿ.




Leave a Reply

Your email address will not be published. Required fields are marked *

error: Content is protected !!