Search

ಬೆನ್ನು ನೋವು ಶಮನಕ್ಕೆ ಟಿಪ್ಸ್

390

ಬೆಂಗಳೂರು : ಆಧುನಿತಕೆ ಬೆಳೆದಂತೆ ಮನುಷ್ಯನ ಲೈಫ್ ಸ್ಟೈಲ್ ಬದಲಾಗಿದೆ. ಇದರಿಂದಾಗಿ ಊಟ, ನಿದ್ದೆ, ದುಡಿಮೆ, ಮನರಂಜನೆ ಸೇರಿದಂತೆ ಪ್ರತಿಯೊಂದು ಬದಲಾವಣೆಯಾಗಿದೆ. ಹೀಗಾಗಿ ಮನುಷ್ಯನ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ತಿವೆ. ಇದರಲ್ಲಿ ಬೆನ್ನು ನೋವು ಸಾಮಾನ್ಯವಾಗಿದೆ. ಬರೋಬ್ಬರಿ ಶೇ.80ರಷ್ಟು ಜನರು ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಅತಿಯಾದ ಶ್ರಮದಾನ, ಕೆಲಸದ ಒತ್ತಡ, ಸದಾ ಸುತ್ತಾಡುವುದು, ಹೆಚ್ಚು ಪ್ರಯಾಣ ಮಾಡುವುದು, ದೇಹಕ್ಕೆ ವಿಶ್ರಾಂತಿ ನೀಡದಷ್ಟು ಕೆಲಸ ಮಾಡುವುದು, ಧೂಮಪಾನ, ಮದ್ಯಪಾನ, ಸೊಟ್ಟುಸೊಟ್ಟವಾಗಿ ಮಲಗುವುದು, ಬೆನ್ನು ಮೂಳೆಯ ಸವೆತ ಸೇರಿದಂತೆ ಅನೇಕ ಕಾರಣಗಳಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತೆ. ಇದಕ್ಕೆ ನೀವು ಮನೆಯಲ್ಲಿಯೇ ಮದ್ದು ಪಡೆಯಬಹುದು.

ಇಲ್ಲಿದೆ ಮನೆಮನದ್ದು :

ಬೆನ್ನು ನೋವು ಕಾಣಿಸಿಕೊಂಡಾಗ, ನೋವು ಇರುವ ಜಾಗಕ್ಕೆ ಬೆಚ್ಚಗಿನ ನೀರಿನ ಶಾಖ ನೀಡಿ. ಪ್ರತಿದಿನ ಶುಂಠಿ ಸೇವಿಸಿ, ಲಿಂಬೆರಸಕ್ಕೆ ಉಪ್ಪು ಸೇರಿಸಿ ಕುಡಿಯಿರಿ. ಪುದಿನಾ ಎಣ್ಣೆಗಳಂಥ ನೈಸರ್ಗಿಕ ಆಯಿಲ್ ಗಳಿಂದ ಮಸಾಜ್ ಮಾಡಿ, ಹಣ್ಣು ಹಾಗೂ ತರಕಾರಿ ಹೆಚ್ಚು ಸೇವಿಸಿ. ಆಗ ಮಾತ್ರೆ, ಔಷಧಿಗೆ ಹೇಳಿ ಗುಡ್ ಬೈ.

ಪ್ರತಿಯೊಂದು ಕ್ಷೇತ್ರದ ತಾಜಾ ಸುದ್ದಿಯನ್ನು ಪಡೆಯಲು ಪ್ರಜಾಸ್ತ್ರ ವೆಬ್ಪೋರ್ಟಲ್ ಫಾಲೋ ಮಾಡಿ ಮತ್ತು ಫೇಸ್ ಬುಕ್ ಪೇಜ್ ಲೈಕ್ ಮಾಡಿ.




Leave a Reply

Your email address will not be published. Required fields are marked *

error: Content is protected !!